Asianet Suvarna News Asianet Suvarna News

News Hour: ಹಿಂದೂ, ಹಿಂಸೆ.. ಲೋಕಸಭೆಯಲ್ಲಿ ರಾಹುಲ್ ಗಾಂಧಿ ಫಸ್ಟ್​ಡೇ ಪವರ್ ಷೋ!

ಲೋಕಸಭೆಯಲ್ಲಿ ರಾಹುಲ್ ಗಾಂಧಿ​ ಫಸ್ಟ್​ಡೇ ಪವರ್​ ಶೋ ನಡೆದಿದೆ. 15 ವಿಷಯ ಪ್ರಸ್ತಾಪಿಸಿ 101 ನಿಮಿಷ ಮಾತಿನ ಪಂಚ್ ನೀಡಿದ್ದಾರೆ. ಎಲ್ಲ ಧರ್ಮಗಳ ಶಾಂತಿ ಸಂದೇಶ ಹೇಳಿ ಅಹಿಂಸೆ ಮಂತ್ರಪಠಣ ಮಾಡಿದ್ದಾರೆ.

ನವದೆಹಲಿ (ಜು.1): ಲೋಕಸಭೆಯಲ್ಲಿ ರಾಹುಲ್ ಗಾಂಧಿ ಫಸ್ಟ್​ಡೇ ಪವರ್ ಷೋ ನಡೆದಿದೆ ಮೋದಿ ಸರ್ಕಾರದ ವಿರುದ್ಧ 101 ನಿಮಿಷ ರಾಹುಲ್ ಘರ್ಜಿಸಿದ್ದಾರೆ. ವಿಪಕ್ಷ ನಾಯಕನಾದ ಬಳಿಕ ಮೊದಲ ಭಾಷಣದಲ್ಲೇ ಅಬ್ಬರದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ತನಿಖೆ ಏಜೆನ್ಸಿ ದುರುಪಯೋಗ ಎಂದು ಭಾಷಣ ಆರಂಭಿಸಿದ ರಾಹುಲ್‌ ಗಾಂಧಿ ಹಲವು ವಿಚಾರಗಳನ್ನು ಪ್ರಸ್ತಾಪ ಮಾಡಿದರು.ಹಿಂದೂ ಅಂತಾ ಹೇಳಿಕೊಂಡು 24 ಗಂಟೆ ಹಿಂಸೆ ಮಾಡುತ್ತಾರೆ ಎನ್ನುವ ಮಾತಿಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಖುದ್ದು ಮೋದಿಯೇ ಎದ್ದು ನಿಂತು ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಹಿಂದೂಗಳು ಹಿಂಸಾವಾದಿಗಳು ಎಂದ ರಾಹುಲ್‌ ಗಾಂಧಿ, 'ಇದು ಗಂಭೀರ ಟೀಕೆ..' ಎಚ್ಚರಿಸಿದ ಪ್ರಧಾನಿ ಮೋದಿ!

ಲೋಕಸಭೆಯಲ್ಲಿ ರಾಹುಲ್​ ಘರ್ಜಿಸಿದರೆ, ರಾಜ್ಯಸಭೆಯಲ್ಲಿ ಖರ್ಗೆ ಮಾತಿನ ಬಾಣ ನೆಟ್ಟಿದ್ದಾರೆ. ಆರ್​ಎಸ್​ಎಸ್​ ಅಪಾಯಕಾರಿ ಎಂದು ಮಾತಿನ ಸಿಡಿಗುಂಡು ಹಾಕಿದ್ದಾರೆ. ನಾಳೆ ಲೋಕಸಭೆಯಲ್ಲಿ ಪ್ರಧಾನಿ ಮೋದಿ ಉತ್ತರ ನೀಡಿದ್ದಾರೆ.

Video Top Stories