Asianet Suvarna News Asianet Suvarna News
breaking news image

ಲೋಕಸಭಾ ಚುನಾವಣೆ 2024, ಬೆಳಗಾವಿಗೆ ಆಗಮಿಸಿದ ಪ್ರಧಾನಿ ಮೋದಿ!

ಬೆಳಗಾವಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, 2ನೇ ಹಂತದ ಪ್ರಚಾರ, ಬರ ಪರಿಹಾರ ಯುದ್ಧದಲ್ಲಿ ಗೆದ್ದ ಕರ್ನಾಟಕ, ನಾಳೆ ಕಾಂಗ್ರೆಸ್ ಪ್ರತಿಭಟನೆ, ಕರ್ನಾಟಕ 1ನೇ ಹಂತ ಮತದಾನ ಬಳಿಕ ನಾಯಕರ ಟಾಕ್ ಫೈಟ್ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

ಲೋಕಸಭಾ ಚುನಾವಣಾ ಪ್ರಚಾರ ಬಿರುಸುಗೊಂಡಿದೆ. ಮೇ.7ರಂದು ನಡೆಯಲಿರುವ ಕರ್ನಾಟಕದ 2ನೇ ಹಂತದ ಚುನಾವಣೆಗಾಗಿ ಇದೀಗ ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗಗೆ ಆಗಮಿಸಿದ್ದಾರೆ. ನಾಳೆ 11 ಗಂಟೆಗೆ ಬೆಳಗಾವಿಯಲ್ಲಿ ಮೋದಿ ಸಮಾವೇಶ ನಡೆಯಲಿದೆ.  1 ಗಂಟೆಗೆ ಉತ್ತರ ಕನ್ನಡ, 3 ಗಂಟೆಗೆ ದಾವಣಗೆರೆ ಹಾಗೂ 5 ಗಂಟೆಗೆ ಬಳ್ಳಾರಿಯಲ್ಲಿ ಮೋದಿ ರ್ಯಾಲಿ ಆಯೋಜಿಸಲಾಗಿದೆ.  ಇತ್ತ ಮೊದಲ ಹಂತದ ಮತದಾನದ ಬಳಿಕ ಇದೀಗ ನಾಯಕರು ವಾಕ್ಸಮರ ಮುಂದುವರಿಸಿದ್ದಾರೆ.  ಕಾಂಗ್ರೆಸ್ ಗೆಲುವು ಎಡಂಕಿ ದಾಟಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರೆ, 12 ರಿಂದ 13 ಕ್ಷೇತ್ರವನ್ನು ಎನ್‌ಡಿಎ ಗೆಲ್ಲಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
 
 

Video Top Stories