ಕೊರೊನಾ ಕಾಲದಲ್ಲೂ ಮೋದಿಯೇ ಜನಮೆಚ್ಚಿದ ನಾಯಕ! ಸಮೀಕ್ಷೆ ತೆರೆದಿಟ್ಟ ಮೋದಿ ಸೀಕ್ರೆಟ್ ಏನು.?

ಕೊರೊನಾ ಕಡುಗಷ್ಟ ಕಾಲದಲ್ಲೂ.. ಮೋದಿಯೇ ಜನಮೆಚ್ಚಿದ ನಾಯಕ ಆಗಿದ್ದು ಹೇಗೆ.? ಆಗ 51%.. ಈಗ 67%.. ಅಷ್ಟು ಜನ ಮೋದಿಯೇ ಮುಂದಿನ ಪ್ರಧಾನಿ ಅಂತ ಹೇಳ್ತಿರೋದೇಕೆ  ಸಮೀಕ್ಷೆ..? ಈಗಿರೋ ಮೋದಿ ಅಲೆಯೇ ಮುಂದೆ ಸುನಾಮಿಯಾಗುತ್ತಾ..? ಅನ್ನೋದನ್ನ ಕಾದು ನೋಡಬೇಕಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ.31): ಕೊರೊನಾ (Coronavirus) ಸಮಯದಲ್ಲೂ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಜನಪ್ರಿಯತೆ ಒಂದಿಂಚೂ ಕುಗ್ಗಿಲ್ಲ. ಬದಲಾಗಿ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿದೆ. ಸಮಸ್ಯೆಗಳ ನಡುವೆಯೂ ದೇಶವನ್ನು ಉತ್ತಮವಾಗಿ ಮುನ್ನಡೆಸುತ್ತಿರುವ ನಾಯಕನ ಬಗ್ಗೆ ದೇಶದ ಜನರು ದೊಡ್ಟ ಮಟ್ಟದ ವಿಶ್ವಾಸ ಇರಿಸಿದ್ದಾರೆ ಎನ್ನುವುದು ಸಮೀಕ್ಷೆಯಂದ ಬಹಿರಂಗವಾಗಿದೆ.

ಬೆಲೆಯೇರಿಕೆ ಹಾಗೂ ನಿರುದ್ಯೋಗದ ಬಗ್ಗೆ ಕಳವಳ ಇದೆಯಾದರೂ ಶೇ.67ರಷ್ಟುಜನರು ಕೇಂದ್ರ ಸರ್ಕಾರದ ಎರಡನೇ ಅವಧಿಯ ಒಟ್ಟಾರೆ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸೋಮವಾರ ಬಿಡುಗಡೆಯಾದ ನೂತನ ಸಮೀಕ್ಷೆಯೊಂದರ ಅಂಕಿಅಂಶಗಳು ಹೇಳಿವೆ.

ಕೊರೋನಾ ನಂತರ ಮೋದಿ ವಿಶ್ವಾಸಾರ್ಹತೆ ಭಾರಿ ಹೆಚ್ಚಳ: ಸಮೀಕ್ಷೆಯಲ್ಲಿ ಬಹಿರಂಗ!

ನರೇಂದ್ರ ಮೋದಿಯವರ ಎರಡನೇ ಅವಧಿಗೆ ಮೂರು ವರ್ಷ ತುಂಬಿದ ಸಮಯದಲ್ಲಿ ಲೋಕಲ್‌ ಸರ್ಕಲ್ಸ್‌ (local circles) ಎಂಬ ಸಂಸ್ಥೆ ನಡೆಸಿದ ಈ ಸಮೀಕ್ಷೆ ಪ್ರಕಟವಾಗಿದ್ದು, ಕಳೆದ ವರ್ಷಕ್ಕಿಂತ ಪ್ರಧಾನಿಯ ಜನಪ್ರಿಯತೆ ಶೇ.16ರಷ್ಟುಏರಿಕೆಯಾಗಿದೆ. ಕಳೆದ ವರ್ಷ ಕೊರೋನಾದ ಎರಡನೇ ಅಲೆ ಭೀಕರವಾಗಿ ಜನರನ್ನು ಕಾಡಿದ ವೇಳೆ ಶೇ.51ರಷ್ಟಿದ್ದ ಅವರ ಜನಪ್ರಿಯತೆ ಈ ವರ್ಷ ಶೇ.67ಕ್ಕೆ ಏರಿಕೆಯಾಗಿದೆ. 2020ರಲ್ಲಿ ಕೊರೋನಾ ಬಂದ ಸಮಯದಲ್ಲಿ ಮೋದಿಯವರ ಜನಪ್ರಿಯತೆ ಶೇ.62 ಇತ್ತು.

Related Video