Asianet Suvarna News Asianet Suvarna News

ಕೊರೆವ ಚಳಿಯಲ್ಲೂ ಲಕ್ಷಾಂತರ ಭಕ್ತರು ರಾಮಲಲ್ಲಾ ದರ್ಶನ, ಆರ್ಥಿಕ ಕೇಂದ್ರ ಬಿಂದುವಾದ ಆಯೋಧ್ಯೆ!

ಭಗವಾನ್ ಶ್ರೀರಾಮನ ದರ್ಶನ ಪಡೆದ ಲಕ್ಷಾಂತರ ಭಕ್ತರು, ಆರ್ಥಿಕ ಕೇಂದ್ರ ಬಿಂದುವಾದ ಆಯೋಧ್ಯೆ,ರಾಮನಿಗೆ ಬಿಜೆಪಿ ಬಿಪಿಎಲ್ ಕಾರ್ಡ್ ಅಡಿಯಲ್ಲಿ ಮನೆ ಕೊಟ್ಟಿದೆ, ಟಿಎಂಸಿ ವ್ಯಂಗ್ಯ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.  

ಆಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆಗೊಂಡಿದೆ. ಇಂದಿನಿಂದಲೇ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಬೆಳಗಿನ ಜಾವ 3 ಗಂಟೆಯಿಂದ ಭಕ್ತರು ಕೊರೆವ ಚಳಿಯನ್ನೂ ಲೆಕ್ಕಿಸದೆ ದರ್ಶನಕ್ಕೆ ಕ್ಯೂ ನಿಂತಿದ್ದರು. ಲಕ್ಷಾಂತರ ಮಂದಿ ಭಗವಾನ್ ರಾಮ ಲಲ್ಲಾ ದರ್ಶನ ಪಡೆದಿದ್ದಾರೆ.  ಜ.22ರಂದು ಪ್ರಧಾನಿ ನರೇಂದ್ರ ಮೋದಿ ಪ್ರಾಣಪ್ರತಿಷ್ಠೆ ನೆರವೇರಿಸಿದ್ದರು. ಬಳಿಕ ಆಹ್ವಾನಿತ ಗಣ್ಯರಿಗೆ ರಾಮ ಮಂದಿರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಜ.23ರಿಂದ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿದೆ. ಆಯೋಧ್ಯೆ ಇದೀಗ ಆರ್ಥಿಕ ಕೇಂದ್ರ ಬಿಂದುವಾಗಿದೆ. ಆಯೋಧ್ಯೆಯಿಂದ ಪ್ರತಿ ವರ್ಷ ತೆರಿಗೆ ಸಂಗ್ರಹ 25 ರಿಂದ 25 ಸಾವಿರ ಕೋಟಿ ರೂಪಾಯಿ ಹೆಚ್ಚಳವಾಗಲಿದೆ ಎಂದು ಎಸ್‌ಬಿಐ ವರದಿ ನೀಡಿದೆ.

Video Top Stories