ಕೊಲ್ಲಿ ರಾಷ್ಟ್ರ ಕುವೈತ್​ಗೆ ರಫ್ತಾಯ್ತು 192 ಮೆಟ್ರಿಕ್ ಟನ್ ಸಗಣಿ!

ನೂಪುರ್ ಶರ್ಮ ಅವರ ಹೇಳಿಕೆಯ ಕುರಿತಾಗಿ ಪ್ರತಿಭಟನಾತ್ಮಕವಾಗಿ ಭಾರತದ ಉತ್ಪನ್ನಗಳನ್ನು ತನ್ನ ನೆಲದಲ್ಲಿ ಬ್ಯಾನ್ ಮಾಡುವುದಾಗಿ ಹೇಳಿದ್ದ ಕೊಲ್ಲಿ ರಾಷ್ಟ್ರ ಕುವೈತ್‌ಗೆ ಈಗ ಬರೋಬ್ಬರಿ 192 ಮೆಟ್ರಿಕ್ ಟನ್ ಸಗಣಿ ರಫ್ತಾಗುತ್ತಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜೂನ್ 18):  ಭಾರತದ ಮಣ್ಣಿನ ಗುಣವೇ ಹಾಗೆ, ಭಾರತವನ್ನು ಯಾರು, ಎಷ್ಟೇ ವಿರೋಧಿಸಲಿ, ವಿರೋಧಿಸಿದವರಿಗೆ ಮುಂದೊಂದು ದಿನ ಭಾರತದ ಆಸರೆ, ಅವಶ್ಯಕತೆ ಬೇಕೇ ಬೇಕಾಗುತ್ತೆ. ಇದು ಭಾರತೀಯ ಸಂಸ್ಕೃತಿ ಮತ್ತು ಇಲ್ಲಿನ ಮಣ್ಣಿನ ಶಕ್ತಿ. ಮೊನ್ನೆ ಭಾರತವನ್ನು ವಿರೋಧಿಸಿದ ಒಂದು ದೇಶದಕ್ಕೆ ತುಂಬಾ ಬೇಗನೇ ಭಾರತದ ಮಣ್ಣಿನ ಮಹತ್ವ ಗೊತ್ತಾಗಿದೆ. ಭಾರತದ ಮಣ್ಣನ್ನು ಬಿಡಿ, ಭಾರತದ ಸಗಣಿ ಮಹತ್ವ ಏನು ಅನ್ನೋದು ಗೊತ್ತಾಗಿದೆ.

ಕೊಲ್ಲಿ ರಾಷ್ಟ್ರ ಕುವೈತ್ (Kuwait ) ಕೆಲ ದಿನಗಳ ಹಿಂದೆ ಭಾರತವನ್ನು (India) ತುಂಬಾನೇ ವಿರೋಧಿಸಿತ್ತು. ತನ್ನ ದೇಶದಲ್ಲಿರುವ ಭಾರತೀಯರನ್ನು ಕುವೈತ್​ ಬಿಟ್ಟು ತೊಲಗಿ ಎಂದು ಹೇಳಿತ್ತು. ಭಾರತ ದೇಶವನ್ನು ಬೆದರಿಸಿ, ಎಚ್ಚರಿಕೆಯನ್ನು ಕೊಟ್ಟಿತ್ತು. ಭಾರತದ ಮೇಲೆ ಇಷ್ಟೆಲ್ಲ ಮಾಡಿದ್ದ ಕುವೈತ್​​, ಈಗ ಭಾರತವನ್ನು ಸಗಣಿಗಾಗಿ (Cowdung) ಬೇಡಿಕೊಳ್ಳುತ್ತಿದೆ.

ಭಾರತದಿಂದ ಕುವೈತ್‌ಗೆ 192 ಟನ್‌ ಸಗಣಿ ರಫ್ತು!

ಕುವೈತ್​​ಗೆ ಭಾರತದ ಹಸುಗಳ (Indian Cows) ಸಗಣಿ ಮಹತ್ವ ಈಗ ತಿಳಿದಿದೆ. ಹೀಗಾಗಿ ಭಾರತಕ್ಕೆ ಭಾರತೀಯ ಹಸುವಿನ ಸಗಣಿ ಬೇಕೆಂದು ಬೇಡಿಕೆ ಇಟ್ಟಿದೆ. ಕುವೈತ್​ ಇಟ್ಟಿರೋ ಬೇಡಿಕೆಗೆ ಭಾರತ ತಥಾಸ್ತು ಎಂದಿದೆ. ಹೀಗಾಗಿ ಕುವೈತ್​​ಗೆ ಹೋಗಲು ಭಾರತದ ಹಸುಗಳ ಸಗಣಿ ರೆಡಿಯಾಗುತ್ತಿದೆ. ಕುವೈತ್​​ ಕಳೆದ ವಾರ ಭಾರತಕ್ಕೆ ಬರೋಬ್ಬರಿ 192 ಮೆಟ್ರಿಕ್​ ಟನ್​​, ಅಂದ್ರೆ ಒಂದು ಲಕ್ಷದ ತೊಂಭತ್ತೆರೆಡು ಸಾವಿರ ಕೆಜಿ ಸಗಣಿ ಗೊಬ್ಬರದ ಬೇಡಿಕೆ ಇಟ್ಟಿದೆ. ಕುವೈತ್​​ನ ಈ ಬೇಡಿಕೆಯನ್ನು ಸ್ವೀಕರಿಸಿದ ಭಾರತ ಕೇವಲ ಒಂದೇ ವಾರದಲ್ಲಿ ಕುವೈತ್​ಗೆ ಬೇಕಿದ್ದ 192 ಮೆಟ್ರಿಕ್​​​ ಟನ್​​ ಸಗಣಿ ಗೊಬ್ಬರವನ್ನು ಭಾರತ ಕಳಿಸಿಕೊಡುತ್ತಿದೆ. 

Related Video