PM Modi in Bengaluru: ಕೊಪ್ಪಳದ ಕಿನ್ನಾಳದಿಂದ ಪ್ರಧಾನಿ ಮೋದಿಗೆ 'ಕಾಮಧೇನು' ಗಿಫ್ಟ್

PM Narendra Modi Karnataka Visit: ಪ್ರಧಾನಿ ಮೋದಿಗೆ ಸಚಿವೆ ಶಶಿಕಲಾ ಜೊಲ್ಲೆ ಕೊಪ್ಪಳದ ಕಿನ್ನಾಳದ ಸ್ಮರಣಿಕೆಯೊಂದನ್ನು ನೀಡಿದ್ದಾರೆ

Share this Video
  • FB
  • Linkdin
  • Whatsapp

ಬೆಂಗಳೂರು (ನ. 11): ಪ್ರಧಾನಿ ನರೇಂದ್ರ ಮೋದಿ (PM Narendra Modi) ಶುಕ್ರವಾರ ಬೆಂಗಳೂರಿಗೆ ಭೇಟಿ ನೀಡಿದ್ದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ ಉದ್ಘಾಟನೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ (Shashikala Jolle) ಅವರು ನಾಡಿನ ಪ್ರಸಿದ್ಧ ಕರಕುಶಲ ಕಲೆಯಾಗಿರುವ ಕೊಪ್ಪಳದ ಕಿನ್ನಾಳದ ಸ್ಮರಣಿಕೆಯೊಂದನ್ನು (Kinnala Art) ನೀಡಿದ್ದಾರೆ. ಕಿನ್ನಾಳ ಕರಕುಶಲ ಗೊಂಬೆಗಳು ಹಾಗೂ ಇತರೆ ಮೂರ್ತಿಗಳ ತಯಾರಿಕೆ ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಬೆಳೆದುಬಂದಿದೆ. ಈ ಕಿನ್ನಾಳದ ಸ್ಮರಣಿಕೆಯನ್ನು ಕಿಶೋರ್‌ ಚಿತ್ರಗಾರ್‌ 7 ದಿನದಲ್ಲಿ ತಯಾರಿ ಮಾಡಿದ್ದಾರೆ. ಕಿಶೋರ್‌ ಚಿತ್ರಗಾರ್‌ ಅವರಿಗೆ ಗಣೇಶ್‌ ಚಿತ್ರಗಾರ್‌, ರಾಘವೇಂದ್ರ ಚಿತ್ರಗಾರ್‌ ಸಾಥ್‌ ನೀಡಿದ್ದಾರೆ. ಈ ಕುರಿತ ಒಂದು ರಿಪೋರ್ಟ್‌ ಇಲ್ಲಿದೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

PM Narendra Modi In Karnataka: ಪ್ರೊಟೋಕಾಲ್‌ ಬಿಟ್ಟು ಜನರೊಂದಿಗೆ ಬೆರೆತ ಪ್ರಧಾನಿ ನರೇಂದ್ರ ಮೋದಿ!


Related Video