
ಪಿಎಫ್ಐ ಉಗ್ರ ಸಂಘಟನೆ ಜೊತೆ ಕೇರಳ ಪೊಲೀಸ್ ಶಾಮೀಲು, ಸರ್ಕಾರದ ಶಸ್ತ್ರಾಸ್ತ್ರ ಪೂರೈಕೆ!
ಪಿಎಫ್ಐ ಉಗ್ರ ಸಂಘಟನೆ ಜೊತೆ ಕೇರಳ ಪೊಲೀಸ್ ಶಾಮೀಲಾಗಿರುವ ಕರಿತು ರಾಷ್ಟ್ರೀಯ ತನಿಖಾ ದಳ ಮಹತ್ವದ ವರದಿ ನೀಡಿದೆ. ಈ ಕುರಿತು ಕೇರಳ ಪೊಲೀಸ್ ಇಲಾಖೆಗೆ ಉತ್ತರಿಸಲು ಸೂಚಿಸಿದೆ. ಇದನ್ನು ಮೀರಿಸುವ ಹಾಗೂ ದೇಶಕ್ಕೆ ಮಾರಕವಾಗಿ ನಡೆದುಕೊಂಡ ಕೇರಳ ಪೊಲೀಸರ ವರ್ತನೆ ಕುರಿತು ಮತ್ತೊಂದು ವರದಿ ಬಹಿರಂಗವಾಗಿದೆ.
ಪಿಎಫ್ಐ ಬ್ಯಾನ್ ಬಳಿಕ ಇದೀಗ ರಾಷ್ಟ್ರೀಯ ತನಿಖಾ ದಳ ಮಹತ್ವದ ವರದಿಯನ್ನು ನೀಡಿದೆ. ಈ ವರದಿಯಲ್ಲಿ ಕೇರಳ ಪೊಲೀಸ್ ಅಧಿಕಾರಿಗಳು ಹಾಗೂ ಪಿಎಫ್ಐ ಜೊತೆಗಿನ ಸಂಪರ್ಕ ಹಾಗೂ ನೆರವು ನೀಡಿದ ಮಾಹಿತಿಯನ್ನು NIA ವರದಿ ನೀಡಿದೆ. ಪಿಎಫ್ಐ ಜೊತೆ ಶಾಮೀಲಾಗಿದ್ದ ಕೇರಳ ಪೊಲೀಸರ ಪಟ್ಟಿಯನ್ನು NIA ನೀಡಿದೆ. ಈ ವರದಿಗೆ ಭಾರತ ಬೆಚ್ಚಿ ಬಿದ್ದಿದೆ. ಆದರೆ ಇದನ್ನೂ ಮೀರಿಸುವ ಮತ್ತೊಂದು ವರದಿ ಇದೆ. ಕೇರಳ ಪೊಲೀಸರಿಗೆ ನೀಡಿರುವ ಅತ್ಯಾಧುನಿಕ ರೈಫಲ್ಸ್, ಜೀವಂತ ಗುಂಡುಗಳು ಕಾಣೆಯಾಗಿದೆ. ಈ ಶಸ್ತಾಸ್ತ್ರಗಳನ್ನು ಕೇರಳ ಪೊಲೀಸರು ಪಿಎಫ್ಐ ಸಂಘಟನೆಗೆ ನೀಡಿರುವ ಆರೋಪಕ್ಕೆ ಬಲವಾದ ಸಾಕ್ಷ್ಯಗಳು ಲಭ್ಯವಾಗಿದೆ. ದೇವರ ನಾಡಿನಲ್ಲಿ ಪ್ರಜೆಗಳ ರಕ್ಷಣೆಗೆ ಇರುವ ಕೇರಳ ಪೊಲೀಸರೆ ಇದೀಗ ಉಗ್ರ ಸಂಘಟನೆ ಜೊತೆ ಶಾಮೀಲಾಗಿರುವ ಮೂಲಕ ಭಾರತವೇ ತಲೆ ತಗ್ಗಿಸುವ ಕೆಲಸ ಮಾಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ