ಕೇರಳ ವಿಧಾನಸಭೆಯಲ್ಲಿ ಕನ್ನಡ, ಭಾಷಾಭಿಮಾನ ಮೆರೆದ ಗಡಿನಾಡ ಶಾಸಕ..!

ಕಾಸರಗೋಡು(ಅ.29): ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಸಿ.ಖಮರುದ್ದೀನ್‌ ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕೇರಳದ ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಇತ್ತೀಚಿಗೆ ಉಪಚುನಾವಣೆ ನಡೆದಿತ್ತು. ಸೋಮವಾರ ತಿರುವನಂತಪುರಂನಲ್ಲಿರುವ (ರಾಜಭವನದಲ್ಲಿ ) ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಗೆದ್ದ ನೂತನ ನಾಲ್ವರು ಶಾಸಕರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮಂಜೇಶ್ವರ ಮುಸ್ಲಿಂ ಲೀಗ್‌ ಶಾಸಕರಾಗಿದ್ದ ಬಿಪಿ ಅಬ್ದುಲ್‌ ರಝಾಕ್‌ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಅ.21 ರಂದು ಉಪಚುನಾವಣೆ ನಡೆದಿತ್ತು. ತಮ್ಮ ಪ್ರತಿಸ್ಫರ್ಧಿ ಬಿಜೆಪಿಯ ರವೀಶ್‌ ತಂತ್ರಿಯನ್ನು 7,923 ಮತಗಳ ಅಂತರದಿಂದ ಸೋಲಿಸಿದ್ದರು.

Share this Video
  • FB
  • Linkdin
  • Whatsapp

Add Asianetnews Kannada as a Preferred SourcegooglePreferred

ಅಕ್ಟೋಬರ್ 29ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Related Video