Asianet Suvarna News Asianet Suvarna News

ಕಚ್ಚತೀವು ವಿವಾದದಲ್ಲಿ ಬಸವಳಿದ ಕಾಂಗ್ರೆಸ್-ಡಿಎಂಕೆ, ತಮಿಳುನಾಡಿನಲ್ಲಿ ಬದಲಾಗುತ್ತಾ ಇತಿಹಾಸ?

ಬಿಜೆಪಿಯಿಂದ ಕಚ್ಚತೀವು ಅಸ್ತ್ರ, ಕಾಂಗ್ರೆಸ್ ಡಿಎಂಕೆಗೆ ತಲೆನೋವು, ಈ 10 ವರ್ಷದ ಅಭಿವೃದ್ಧಿ ಟ್ರೇಲರ್, 3ನೇ ಅವಧಿಯಲ್ಲಿ ನಿಜವಾದ ಅಭಿವೃದ್ಧಿ, ಮೋದಿ, ಡಿಕೆ ಶಿವಕುಮಾರ್‌ಗೆ ಸಿದ್ಧಾಂತ ಏಟಿಗೆ ತಿರುಗೇಟು ನೀಡಿದ ಹೆಚ್‌ಡಿ ಕುಮಾರಸ್ವಾಮಿ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

ಲೋಕಸಭಾ ಚುನಾವಣೆ ಹೊತ್ತಲ್ಲಿ ಬಿಜೆಪಿ ಬಳಸಿರುವ ಕಚ್ಚತೀವು ದ್ವೀಪ ಅಸ್ತ್ರ ಕಾಂಗ್ರೆಸ್ ಹಾಗೂ ಡಿಎಂಕೆಗೆ ಭಾರಿ ತಲೆನೋವು ತಂದಿದೆ. 1974ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಈ ದ್ವೀಪವನ್ನು ಶ್ರೀಲಂಕಾಗೆ ನೀಡಿದರು. ಭಾರತದ ಅಂಗವಾಗಿದ್ದ ಈ ದ್ವೀಪ ಲಂಕಾಗೆ ನೀಡಿ ಭಾರತಕ್ಕೆ ದ್ರೋಹ ಬಗೆದಿದ್ದಾರೆ. ಈ ದ್ವೀಪ ಕೈತಪ್ಪಿದ ಕಾರಣ ತಮಿಳುನಾಡು ಮೀನುಗಾರರ ಹೈರಣಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಕಚ್ಚತೀವು ದ್ವೀಪದ ಅಧಿಕೃತ ಆರ್‌ಟಿಐ ಮಾಹಿತಿ ಕೋಲಾಹಲವನ್ನೇ ಸೃಷ್ಟಿಸಿದೆ. ಲೋಕಸಭಾ ಚುನಾವಣೆ ಹೊತ್ತಲ್ಲಿ ಬಿಜೆಪಿ ಝಳಪಿಸಿರುವ ಈ ಅಸ್ತ್ರ ಕಾಂಗ್ರೆಸ್ ಹಾಗೂ ಡಿಎಂಕೆ ತಲೆನೋವಾಗಿದೆ. ಇದು ತಮಿಳುನಾಡಿನಲ್ಲಿ ಬಿಜೆಪಿಗೆ ಹೊಸ ತಿರುವು ಕೊಡುತ್ತಾ?  ಏನಿದು ಕಚ್ಚತೀವು ದ್ವೀಪ?  

Video Top Stories