ಕಾಶಿ, ಮಥುರಾ ವಿವಾದ ಬಗೆಹರಿಸಲು ಆರೆಸ್ಸೆಸ್‌ ಪ್ಲ್ಯಾನ್‌, ಮುಗಿಯುತ್ತಾ ದಶಕಗಳ ವಿವಾದ?

ದಶಕಗಳ ಕಾಲ ವಿವಾದದ ರೂಪದಲ್ಲಿಯೇ ಇರುವ ಕಾಶಿ ಹಾಗೂ ಮಥುರಾ ವಿವಾದ ಸೌಹಾರ್ದಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಆರಂಭವಾಗಿದೆ. ಆರೆಸ್ಸೆಸ್‌ ಸರಸಂಘಚಾಲಕರ ಬಳಿಕ ಮುಸ್ಲಿಂ ಚಿಂತಕರೊಂದಿಗೆ ಆರೆಸ್ಸೆಸ್‌ ಉಳಿದ ನಾಯಕರು 2ನೇ ಸಭೆ ನಡೆಸಿದ್ದಾರೆ.
 

Share this Video

ನವದೆಹಲಿ (ಜ.30): ಅಯೋಧ್ಯೆ ಬಳಿಕ ಕಾಶಿ ವಿಶ್ವನಾಥ ಹಾಗೂ ಮಥುರಾದ ಶ್ರೀಕೃಷ್ಣ ಜನ್ಮಭೂಮಿಯನ್ನು ಮತ್ತೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಹಿಂದುಗಳ ಹೋರಾಟ ಆರಂಭವಾಗಿದೆ. ಈಗಾಗಲೇ ಈ ಎರಡೂ ಕೇಸ್‌ಗಳ ವಿಚಾರಣೆ ಕೋರ್ಟ್‌ನಲ್ಲಿದೆ. ಇದರ ನಡುವೆ ವಿವಾದವನ್ನು ಸೌಹಾರ್ದವಾಗಿ ಬಗೆಹರಿಸುವ ನಿಟ್ಟಿನಲ್ಲಿ ಆರೆಸ್ಸೆಸ್‌ನ ಪ್ರಯತ್ನ ಆರಂಭವಾಗಿದೆ.

ವಿವಾದದಿಂದ ವಿಶ್ವಾಸದೆಡೆಗೆ ಆರೆಸ್ಸೆಸ್‌ ಮಹಾ ಹೆಜ್ಜೆ ಇಡುತ್ತಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಆರೆಸ್ಸೆಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌ ದೆಹಲಿಯಲ್ಲಿ ಇಮಾಮ್‌ ಅಸೋಸಿಯೇಷನ್‌ ಮುಖ್ಯಸ್ಥ ಉಮರ್‌ ಅಹ್ಮದ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆ ಬಳಿಕ ಜನವರಿ 14 ರಂದು ಮಾಜಿ ಗವರ್ನರ್‌ ನಜೀಬ್‌ ಜಂಗ್‌ ಮನೆಯಲ್ಲಿ ಆರೆಸ್ಸೆಸ್‌ ನಾಯಕರಾದ ಇಂದ್ರೇಶ್‌ ಕುಮಾರ್‌, ಕೃಷ್ಣಗೋಪಾಲ್‌, ರಾಮ್‌ಲಾಲ್‌ ಹಾಗೂ ಮುಸ್ಲಿಂ ಚಿಂತಕರಾದ ಮಾಜಿ ಚುನಾವಣಾ ಆಯುಕ್ತ ಸಯ್ಯದ್‌ ಖುರೇಷಿ, ಪತ್ರಕರ್ತ ಶಾಹಿದ್‌ ಸಿದ್ದಿಕಿ, ದಾರೂಲ್ - ಇ- ಇಸ್ಲಾಂ ಹಿಂದ್, ಜಾಮತ್ ಉಲಾಮಾ ಇ ಹಿಂದ್, ದಾರೂಲ್ ಉಲಾಮ್ ದಿಯೋಬಂದ್ ನಾಯಕರು ಭಾಗವಹಿಸಿದ್ದರು.

60 ಕೆಜಿ ಚಿನ್ನ, 10 ಕೆಜಿ ಬೆಳ್ಳಿ, 50 ಕೋಟಿ ನಗದು, ಕಾಶಿ ವಿಶ್ವನಾಥ ಕೂಡ ಈಗ ಶ್ರೀಮಂತ!

ಇದರ ನಡುವೆ ಸೌಹಾರ್ದತೆಗೆ ಎಐಎಂಐಎಂ ಮುಖಂಡ ಆಸಿಮ್‌ ವಖಾರ್‌ ವಿರೋಧ ವ್ಯಕ್ತಪಡಿಸಿದ್ದಾರೆ. ಆರೆಸ್ಸೆಸ್‌ನವರಿಗೆ ಯಾವ ಅಧಿಕಾರ ಇದೆ ಎಂದು ಮಾತುಕತೆ ಮಾಡುತ್ತಿದ್ದಾರೆ. ಮಾತುಕತೆಗೆ ಹೋದವರು ಮುಸ್ಲಿಂ ಸಮಾಜವನ್ನು ಪ್ರತಿನಿಧಿಸುತ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ. ಸರ್ಕಾರದಿಂದ ಲಾಭ ಪಡೆದ ಕೆಲ ಮುಸ್ಲಿಮರು ಮಾತುಕತೆಗೆ ಹೋಗಿದ್ದಾರೆ. ಆರೆಸ್ಸೆಸ್ ದೇಶದ ಎಲ್ಲ ಹಿಂದೂಗಳನ್ನು ಪ್ರತಿನಿಧಿಸುವುದಿಲ್ಲ. ಆರೆಸ್ಸೆಸ್ ನವರಿಗೆ ಬೇಕಾದಂತೆ ಮಾತುಕತೆ ನಡೆಸಬಾರದು ಎಂದು ಸಿಪಿಐ ಮುಖಂಡ ಅತುಲ್‌ ಅಂಜಾನ್‌ ಹೇಳಿದ್ದಾರೆ.

Related Video