
News Hour ಅಜಾನ್ ವಿವಾದ ಅಂತ್ಯಕ್ಕೆ ಹೊಸ ಮಾರ್ಗಸೂಚಿ ಪ್ರಕಟ, ಕಠಿಣ ನಿಯಮ ಜಾರಿ!
- ಲೌಡ್‌ಸ್ಪೀಕರ್ ಬಳಕೆಗೆ ಅನುಮತಿ ಕಡ್ಡಾಯ
- ಅಶ್ವತ್ಥ್ ಎಂಬಿ ಪಾಟೀಲ್ ಭೇಟಿ ವರದಿ, ಡಿಕೆಶಿ ಟಾಂಗ್
- 1.5 ಲಕ್ಷ ಕೋಟಿ ಆದಾಯ, 3.5 ಲಕ್ಷ ಖರ್ಚು
ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ ಧ್ವನಿವರ್ಧಕ ಬಳಕೆಗೆ ನಿಷೇಧ ಹೇರಲಾಗಿದೆ. ಎಲ್ಲಾ ಸ್ಪೀಕರ್ ಬಳಕೆಗೆ ಅನುಮತಿ ಕಡ್ಡಾಯ ಸೇರಿದಂತೆ ಕಟ್ಟು ನಿಟ್ಟಿನ ನಿಯಮಗಳನ್ನೊಳಗೊಂಡ ಮಾರ್ಗಸೂಚಿ ಪ್ರಕಟಗೊಂಡಿದೆ. ಇತ್ತ ಅಶ್ವತ್ಥ್ ನಾರಾಯಣ್ ತಮ್ಮ ರಕ್ಷಣೆಗಾಗಿ ಕಾಂಗ್ರೆಸ್ ನಾಯಕರ ಭೇಟಿಯಾಗಿದ್ದಾರೆ ಎಂಬ ಡಿಕೆ ಶಿವಕುಮಾರ್ ಮಾತು ಇದೀಗ ಕಾಂಗ್ರೆಸ್ ನಾಯಕರಲ್ಲೇ ಗುದ್ದಾಟಕ್ಕೆ ಕಾರಣವಾಗಿದೆ. ಸ್ವತಃ ಎಂಬಿ ಪಾಟೀಲ್ ಡಿಕೆಶಿ ಮಾತಿಗೆ ಅಸಮಾಧಾನ ತೋಡಿಕೊಂಡಿದ್ದಾರೆ.