ಮೋದಿ ಜೊತೆ ಕುಸ್ತಿ,ಉಗ್ರರ ದೋಸ್ತಿ, ಖಲಿಸ್ತಾನ ತಾಳಕ್ಕೆ ತಕ್ಕಂತೆ ಕುಣಿಯವುದೇ ಕೆನಡಾದ ಹೊಸ ನೀತಿ!
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಕುಸ್ತಿ.. ಭಾರತವನ್ನ ಛಿದ್ರಗೊಳಿಸೋಕೆ ಹೊಂಚು ಹಾಕಿರೋ ಉಗ್ರರ ದೋಸ್ತಿ.. ಇದು ಮತ್ತೇನೂ ಅಲ್ಲ, ಕೆನಡಾದ ಹೊಚ್ಚ ಹೊಸ ನೀತಿ.. ಉಗ್ರಗಾಮಿಯ ಕೊಲೆ ಕೊಂದು ತಿಂದಿತಾ ಇಂಡೋ-ಕೆನಡಾ ಸಂಬಂಧ?
ಜಗತ್ತಿನ ಬಹುತೇಕ ದೇಶಗಳು, ಭಾರತದ ಜೊತೆ ಮೈತ್ರಿ ಮಾಡಿಕೊಳ್ಳಲು ಹಾತೊರೆಯುತ್ತಿದೆ. ಆದರೆ ಕೆನಡಾ ಮಾತ್ರ, ನನಗೆ ಭಾರತದ ವಿರುದ್ದ ಹೆಜ್ಜೆ ಹೆಜ್ಜೆಗೂ ದ್ವೇಷ ವ್ಯಕ್ತಪಡಿಸುತ್ತಿದೆ. ಕೆನಡಾದಲ್ಲಿನ ಉಗ್ರಸಂಘಟನೆ ಖಲಿಸ್ತಾನದ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಸಾವಿನ ಹಿಂದೆ ಭಾರತ ಸರ್ಕಾರದ ಕೈವಾಡವಿದೆ ಅನ್ನೋ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಕೆನಡಾದಲ್ಲಾದ ಕೊಲೆಗೆ ಭಾರತವೇ ಹೊಣೆ ಅನ್ನೋ ಘೋರ-ಗಂಭೀರ ಆರೋಪ ಮಾಡಿದೆ. ಭಾರತ ಹಾಗೂ ಕೆನಡಾ ನಡುವಿನ ಸಂಬಂಧಕ್ಕೆ ಕತ್ತರಿ ಹಾಕಿರುವ ಹರ್ದೀಪ್ ಸಿಂಗ್ ನಿಜ್ಜರ್ ಕೊಲೆ ಹಾಗೂ ಖಲಿಸ್ತಾನ ಪ್ರತಿಭಟನೆ ಹಿಂದಿನ ಅಸಲಿಯತ್ತೇನು?