Asianet Suvarna News Asianet Suvarna News

Amarnath Cloudburst: ಮೇಘಸ್ಫೋಟ ನಂತರ ಈಗ ಹೇಗಿದೆ ಅಮರನಾಥ? ಇಲ್ಲಿದೆ ಬಾಲ್ಟಾಲ್​​​ ಗ್ರೌಂಡ್​ ರಿಪೋರ್ಟ್

Amarnath Cloudburst Ground Report: ಮೇಘಸ್ಫೋಟವಾದ ಅಮರನಾಥದ ಪರಿಸ್ಥಿತಿ ಹೇಗಿದೆ ಅನ್ನೋದನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್ ದೆಹಲಿ ವರದಿಗಾರ ಮಂಜುನಾಥ್​​​​​, ಅಲ್ಲಿಂದಲೇ ಗ್ರೌಂಡ್​ ರಿಪೋರ್ಟ್​ ಕೊಟ್ಟಿದ್ದಾರೆ ನೋಡೋಣ

ಕಾಶ್ಮೀರ (ಜು. 11): ಕಳೆದ ಹತ್ತು ದಿನಳ ಹಿಂದೆ ಅಮರನಾಥೇಶ್ವರ ದರ್ಶನಕ್ಕೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ಧಾವಿಸಿದ್ದರು. ಅಮರನಾಥ ಯಾತ್ರೆ ಶುರುವಾದ ಒಂದು ವಾರದವರೆಗೂ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ನಾಲ್ಕು ದಿನಗಳ ಹಿಂದೆ ಮೇಘಸ್ಫೋಟ ಸಂಭವಿಸಿತ್ತು. ಮೊನ್ನೆ ಘಟಿಸಿದ ಮೇಘಸ್ಫೋಟ ಕಳೆದ ವರ್ಷಕ್ಕಿಂತ ಭಯಾನಕವಾಗಿತ್ತು.  ಈ ಮೇಘ ಸ್ಪೋಟ ಗುಹೆಯ ಬಳಿನೇ ಸಂಭವಿಸಿತ್ತು. ಮೇಘಸ್ಫೋಟದಿಂದ ಪ್ರವಾಹ ಉಂಟಾಗಿತ್ತು. ಉಕ್ಕಿಬಂದ ಪ್ರವಾಹದಿಂದಾಗಿ ಪ್ರವಾಸಿಗರು ಕಂಗಾಲಾಗಿದ್ದರು.  

ಪ್ರವಾಸಿಗರಿಗೆಂದು ನಿರ್ಮಿಸಲಾಗಿದ್ದ ಟೆಂಟ್​​​ ಒಳಗೆ ಪ್ರವಾಹ ನೀರು ಹೊಕ್ಕಿತ್ತು. 16 ಸಾವು, ಕಾಣೆಯಾದವರ ಲೆಕ್ಕ ಸಿಗುತ್ತಿಲ್ಲ. ಮೂರು ದಿನಗಳಿಂದ ಪ್ರವಾಸಿಗರ ರಕ್ಷಣೆ ಕಾರ್ಯ ನಡೆಯುತ್ತಲ್ಲೇ ಇದೆ. ಆದರೆ ಭಕ್ತರ ರಕ್ಷಣೆ ಕಾರ್ಯಕ್ಕೂ ಸಹ ಸೈನಿಕರಿಗೆ ಪ್ರಕೃತಿ ಇಲ್ಲಿವರೆಗೂ ಅಡ್ಡಿ ಪಡಿಸಿದೆ.  ನಿನ್ನೆವರೆಗೂ ಅಮರನಾಥದಲ್ಲಿ ಪರಿಸ್ಥಿತಿ ತುಂಬಾನೇ ಭಯಾನಕವಾಗಿತ್ತು. ಆದರೆ ಇಂದು ಬೆಳಗ್ಗೆಯಿಂದ ಓಕೆ ಓಕೆ ಅನ್ನುವಂತಿದೆ. ಹಾಗಿದ್ರೆ ಬನ್ನಿ ಮೇಘಸ್ಫೋಟವಾದ ಅಮರನಾಥದ ಪರಿಸ್ಥಿತಿ ಹೇಗಿದೆ ಅನ್ನೋದನ್ನು ನಮ್ಮ ದೆಹಲಿ ವರದಿಗಾರ ಮಂಜುನಾಥ್​​​​​, ಅಲ್ಲಿಂದಲೇ ಗ್ರೌಂಡ್​ ರಿಪೋರ್ಟ್​ ಕೊಟ್ಟಿದ್ದಾರೆ ನೋಡೋಣ

ಇದನ್ನೂ ನೋಡಿ: ಭೋರ್ಗರೆಯುತ್ತಿವೆ ಜೋಗ, ದೂದ್ ಸಾಗರ: ಕಣ್ಮನ ಸೆಳೆಯುತ್ತಿವೆ ಮೈದುಂಬಿ ಹರಿಯುತ್ತಿರೋ ಜಲಪಾತಗಳು

Video Top Stories