
ರೇಣುಕಾಚಾರ್ಯ ಸಹೋದರನ ಪುತ್ರನ ಸಾವಿನ ಹಿಂದೆ ಹಲವು ಅನುಮಾನ, ಕಣ್ಣೀರಿಟ್ಟ ಶಾಸಕ!
ರೇಣುಕಾಚಾರ್ಯ ಸಹೋದರನ ಪುತ್ರನ ಸಾವಿನ ಹಿಂದೆ ಹಲವು ಅನುಮಾನ, ಬಿಜೆಪಿ ಸೇರಿಕೊಂಡ ಮೂವರು ಪ್ರಮುಖ ನಾಯರು, ಕಾಂಗ್ರೆಸ್ ಆಹ್ವಾನಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ, ಕ್ಷೇತ್ರ ಹುಡುಕಾಟದಲ್ಲಿರುವ ಸಿದ್ದುಗೆ ಶಾಕ್ ಸೇರಿದಂತೆ ಇಂದಿನ ಇಡೀ ದಿನದ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ನಾಪತ್ತೆ ಪ್ರಕರಣ ಮತ್ತೊಂದು ತಿರುವು ಪಡೆದಿದೆ. ನಾಲ್ಕು ದಿನಗಳ ಬಳಿಕ ಚಂದ್ರಶೇಖರ್ ಶವವಾಗಿ ಪತ್ತೆಯಾಗಿದ್ದಾನೆ. ನಾಲೆಯಲ್ಲಿ ಚಂದ್ರಶೇಖರ್ ಸಂಚರಿಸಿದ ಕಾರು ಪತ್ತೆಯಾಗಿದೆ. ನೀರಿನಿಂದ ಕಾರು ಮೇಲಕ್ಕೆತ್ತಿದಾಗ ಕಾರಿನೊಳಗೆ ಚಂದ್ರಶೇಖರ್ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಇದು ಅಪಘಾತದಂತಿದೆ. ಆದರೆ ಚಂದ್ರಶೇಖರ್ ಶವ ಕಾರಿನ ಹಿಂಬಾಗದ ಸೀಟಿನಲ್ಲಿ ಮಲಗಿದ ಸ್ಥಿತಿಯಲ್ಲಿ ಮತ್ತೆಯಾಗಿದೆ. ಇದು ಮತ್ತೆ ಕೆಲ ಅನುಮಾನಕ್ಕೆ ಎಡೆ ಮಾಡಿದೆ. ಇತ್ತ ಇದು ಅಪಘಾತವಲ್ಲ, ಕೊಲೆ ಎಂದು ರೇಣುಕಾಚಾರ್ಯ ಆರೋಪಿಸಿದ್ದಾರೆ. ಘಟನೆಯಿಂದ ತೀವ್ರವಾಗಿ ನೊಂದಿರುವ ರೇಣುಕಾಚಾರ್ಯ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.