ಗಣರಾಜ್ಯೋತ್ಸವ ದಿನ ಸ್ಫೋಟಕ್ಕೆ ಸಂಚು ನಡೆಸಿದ 8 ಶಂಕಿತರ ಭಯೋತ್ಪಾದಕರ ಬಂಧನ!
ಗಣರಾಜ್ಯೋತ್ಸವ ದಿನ ಸ್ಫೋಟಕ್ಕೆ ಸಂಚು ನಡೆಸುತ್ತಿದ್ದ 8 ಶಂಕಿತ ಭಯೋತ್ಪಾದಕರನ್ನು NIA ಬಂಧಿಸಿದೆ. ಕರ್ನಾಟಕ ಸೇರಿದಂತೆ ದೇಶದ 40ಕ್ಕೂ ಹೆಚ್ಚು ದಾಳಿ ನಡೆಸಿ ಶಂಕಿತ ಉಗ್ರರನ್ನು ಬಂಧಿಸಲಾಗಿದೆ.
ನವದೆಹಲಿ(ಡಿ.18) ಗಣರಾಜ್ಯೋತ್ಸವದಿನ ಸ್ಫೋಟಕ್ಕೆ ಸಂಚು ನಡೆಸುತ್ತಿದ್ದ ಶಂಕಿತರ ಭಯೋತ್ಪಾದಕರ ಮೇಲೆ NIA ದಾಳಿ ನಡೆಸಿದೆ. ಒಟ್ಟು 40ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ 8 ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ ಐವರು ಕರ್ನಾಟಕದವರು. ಇನ್ನು ಕರ್ನಾಟಕದ 34 ಕಡೆ NIA ದಾಳಿ ನಡೆಸಿ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಅತೀ ದೊಡ್ಡ ದುರಂತವನ್ನು ಎನ್‌ಐಎ ತಪ್ಪಿಸಿದೆ. ದೇಶದ ಹಲೆವೆಡೆ ನಡೆಸಿದ ದಾಳಿಯಲ್ಲಿ ಕರ್ನಾಟಕದ ಬೆಂಗಳೂರು, ಬಳ್ಳಾರಿ ಸೇರಿದಂತೆ ಹಲೆವೆಡೆ ದಾಳಿ ನಡೆಸಲಾಗಿದೆ. ಬಂಧಿತರಾಗಿರುವ 8 ಶಂಕಿತರ ಪೈಕಿ ಐವರು ಕರ್ನಾಟಕದವರು.