News 360: LPG ಸಿಲಿಂಡರ್ ಬೆಲೆ ಇಳಿಕೆಯ ಹಿಂದೆ ಚುನಾವಣಾ ಲೆಕ್ಕಾಚಾರ?
ಇಂದಿನ ಅತಿದೊಡ್ಡ ನಿರ್ಧಾರದಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ದರದಲ್ಲಿ 200 ರೂಪಾಯಿ ಇಳಿಕೆ ಮಾಡಿದೆ. ಇದರ ಹಿಂದೆ ಚುನಾವಣೆ ಲೆಕ್ಕಾಚಾರ ಅಡಗಿದೆ ಎನ್ನಲಾಗಿದೆ.
ನವದೆಹಲಿ (ಆ.29): ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇಂಡಿ ಒಕ್ಕೂಟ ಬೆಲೆ ಏರಿಕೆಯನ್ನೇ ಪ್ರಧಾನ ಅಸ್ತ್ರವನ್ನಾಗಿ ಬಳಸಿಕೊಳ್ಳಬಹುದು ಎನ್ನುವ ಅಂದಾಜಿನಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ರಕ್ಷಾಬಂಧನದ ಗಿಫ್ಟ್ ಎನ್ನುವ ರೀತಿಯಲ್ಲಿ ಗೃಹ ಬಳಕೆ ಸಿಲಿಂಡರ್‌ಗೆ 200 ರೂಪಾಯಿ ಸಬ್ಸಿಡಿ ಘೋಷಣೆ ಮಾಡಿದೆ.
ಲೋಕಸಭೆ ಚುನಾವಣೆ ಹಾಗೂ ಪಂಚ ರಾಜ್ಯಗಳ ಚುನಾವಣೆಯನ್ನು ಟಾರ್ಗೆಟ್ ಮಾಡುವ ಇರಾದೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ಮಾಡಿದೆ. ಈ ನಡುವೆ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯಲ್ಲೂ ಇಳಿಕೆ ಮಾಡುವ ಸಾಧ್ಯತೆ ಇದೆ.
LPG Gas Price: ರಕ್ಷಾಬಂಧನಕ್ಕೆ ಕೇಂದ್ರದ ಬಂಪರ್ ಗಿಫ್ಟ್, ಗ್ಯಾಸ್ ಸಿಲಿಂಡರ್ ಬೆಲೆ 200 ರೂ ಇಳಿಕೆ!
ಕಾಂಗ್ರೆಸ್ ಕರ್ನಾಟಕದಲ್ಲಿ ಗ್ಯಾರಂಟಿಗಳ ಮೂಲಕ ಅಧಿಕಾರ ಹಿಡಿದಿದ್ದು, ಉಳಿದ ರಾಜ್ಯಗಳಲ್ಲೂ ಇದೇ ಮಾದರಿಯನ್ನು ಪ್ರಯೋಗ ಮಾಡಲು ಆರಂಭಿಸಿದೆ. ಕಾಂಗ್ರೆಸ್‌ನ ಗ್ಯಾರಂಟಿಗಳಿಗೆ ಬಿಜೆಪಿಯಿಂದ ಬೆಲೆ ಇಳಿಕೆ ತಂತ್ರವನ್ನು ಕೇಂದ್ರ ಪ್ರಯೋಗಿಸಿದೆ.