Asianet Suvarna News Asianet Suvarna News

ಹಿಜಾಬ್ ವಿರೋಧಿಸಿ ಇರಾನ್‌ನಲ್ಲಿ ಭಾರಿ ಪ್ರತಿಭಟನೆ, ಭಾರತದಲ್ಲಿ ಬೇಕು, ದ್ವಂದ್ವ ನಿಲುವಿನ ಸಮರ ಯಾಕೆ?

ಇರಾನ್‌ನಲ್ಲಿ ಹಿಜಾಬ್ ವಿರೋಧಿಸಿ ಭಾರಿ ಪ್ರತಿಭಟನೆ ನಡೆಯುತ್ತಿದೆ. ಭಾರತದಲ್ಲಿ ಹಿಜಾಬ್ ಬೇಕು ಎಂದು ಸತತವಾಗಿ ಹೋರಾಟ ನಡೆಯುತ್ತಿದೆ. ಈ ದ್ವಂದ್ವ ನಿಲುವು ಯಾಕೆ? ಇಸ್ಲಾಂನಲ್ಲಿ ಹಿಜಾಬ್ ಅವಿಭಾಜ್ಯ ಅಂಗವೇ? ಅಥವಾ ಪುರುಷ ಪ್ರಧಾನ ಸಮಾಜ ಮಹಿಳೆಯರನ್ನು ನಿಯಂತ್ರಣದಲ್ಲಿಡಲು ಹಿಜಾಬ್ ವಸ್ತ್ರ ಸಂಹಿತೆ ಹೇರಲಾಯಿತೆ? ಸಂಪೂರ್ಣ ವಿವರ ಇಲ್ಲಿದೆ

Sep 19, 2022, 9:34 PM IST

ಇರಾನ್‌ನಲ್ಲಿ ಹಿಜಾಬ್ ವಿರೋಧಿಸಿ ಮುಸ್ಲಿಂ ಮಹಿಳೆಯರು ಭಾರಿ ಪ್ರತಿಭಟನೆ ಆರಂಭಿಸಿದ್ದಾರೆ. ಹಿಜಾಬ್ ಸರಿಯಾಗಿ ಧರಿಸಿಲ್ಲ ಅನ್ನೋ ಕಾರಣಕ್ಕೆ ಕುಟುಂಬದ ಜೊತೆ ತೆರಳುತ್ತಿದ್ದ ಮುಸ್ಲಿಮ್ ಯುವತಿಯ ಮೇಲೆ ದಾಳಿ ಮಾಡಲಾಗಿದೆ. ಈ ಯುವತಿ ಸಾವನ್ನಪ್ಪಿದ್ದಾಳೆ. ಇದರಿಂದ ರೊಚ್ಚಿಗೆದ್ದಿರುವ ಇರಾನ್ ಮುಸ್ಲಿಮ್ ಮಹಿಳೆಯರು ಭಾರಿ ಪ್ರತಿಭಟನೆ ಮಾಡಲಾಗುತ್ತಿದೆ. ಈ ಘಟನೆಯನ್ನು ಇದೀಗ ಕರ್ನಾಟಕ ಹಿಜಾಬ್ ಹೋರಾಟ ಹೋಲಿಕೆ ಮಾಡಲಾಗುತ್ತಿದೆ. ಇಸ್ಲಾಮಿಕ್ ದೇಶದಲ್ಲಿ ಹಿಜಾಬ್ ಬೇಡ ಅನ್ನೋ ಹೋರಾಟ ಜೋರಾಗಿದ್ದರೆ, ಭಾರತದಲ್ಲಿ ಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಸಮರ ನಡೆಸುತ್ತಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.