Asianet Suvarna News Asianet Suvarna News

ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ವಿಕ್ರಾಂತ್ ಸಂಚಾರ ಆರಂಭ!

Aug 4, 2021, 5:32 PM IST

ನವದೆಹಲಿ(ಆ.04): ಸ್ವದೇಶಿ ನಿರ್ಮಿತ ಮೊದಲ ವಿಮಾನವಾಹಕ ಯುದ್ಧ ನೌಕೆ (ಐಎಸಿ) ವಿಕ್ರಾಂತ್‌ ಬುಧವಾರ ಸಮುದ್ರದಲ್ಲಿ ತನ್ನ ಮೊದಲ ಪ್ರಯೋಗಾರ್ಥ ಸಂಚಾರ ಆರಂಭಿಸಿದೆ.

ದೇಶದ ಅತಿದೊಡ್ಡ ಮತ್ತು ಅತ್ಯಂತ ಸಂಕೀರ್ಣದಿಂದ ಕೂಡಿರುವ ಯುದ್ಧ ನೌಕೆ ಇದಾಗಿದ್ದು, ಸಂಚಾರ ಆರಂಭಿಸಿದ ಈ ದಿನ ಭಾರತೀಯ ನೌಕಾಪಡೆಯ ಪಾಲಿಗೆ ಐತಿಹಾಸಿಕ ದಿನವೆಂದು ಬಣ್ಣಿಸಲಾಗಿದೆ.

ಅತ್ಯಾಧುನಿಕ ವಿಮಾನವಹಕ ಯುದ್ಧ ನೌಕೆಯನ್ನು ದೇಶೀಯವಾಗಿ ವಿನ್ಯಾಸಗೊಳಿಸಿ, ನಿರ್ಮಿಸಿ, ಸಂಯೋಜಿಸಲಾಗಿದೆ. ಈ ಮೂಲಕ ಭಾರತವು ಜಗತ್ತಿನಲ್ಲಿ ಇಂಥ ಸಾಮರ್ಥ್ಯ ಹೊಂದಿರುವ ಕೆಲವೇ ಕೆಲವು ದೇಶಗಳ ಗುಂಪಿಗೆ ಸೇರಿದಂತಾಗಿದೆ ಎಂದು ನೌಕಾಪಡೆ ತಿಳಿಸಿದೆ.