
ಪುಟಿನ್, ಬೈಡೆನ್‌ರನ್ನೇ ಹಿಂದಿಕ್ಕಿದ ಮೋದಿ ಈಗ ವಿಶ್ವದ ನಂಬರ್ 1 ನಾಯಕ!
ವಿಶ್ವ ಮೆಚ್ಚಿದ ಪ್ರಧಾನಿ ಮೋದಿಗೆ ಸಾಟಿ ಯಾರೂ ಇಲ್ಲ. ವಿಶ್ವದ ಅಗ್ರ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಯೇ ನಂಬರ್ ವನ್. ಪುಟಿನ್, ಬೈಡೆನ್ ಸೇರಿ ವಿಶ್ವ ದಿಗ್ಗಜರನ್ನೇ ಹಿಂದಿಕ್ಕಿದ ಮೋದಿ.
ನವದೆಹಲಿ(ಜ.23): ವಿಶ್ವ ಮೆಚ್ಚಿದ ಪ್ರಧಾನಿ ಮೋದಿಗೆ ಸಾಟಿ ಯಾರೂ ಇಲ್ಲ. ವಿಶ್ವದ ಅಗ್ರ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಯೇ ನಂಬರ್ ವನ್. ಪುಟಿನ್, ಬೈಡೆನ್ ಸೇರಿ ವಿಶ್ವ ದಿಗ್ಗಜರನ್ನೇ ಹಿಂದಿಕ್ಕಿದ ಮೋದಿ.
Add Asianetnews Kannada as a Preferred Source

ವಿಶ್ವದ ಆಯ್ದ 13 ನಾಯಕರ ಕುರಿತು ಆಯಾ ದೇಶಗಳಲ್ಲಿ ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ಈ ಸಮೀಕ್ಷೆ ನಡೆಸಿದೆ. 2021ರ ನವೆಂಬರ್‌ನಲ್ಲಿ ಇದೇ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲೂ ಮೋದಿ ಪ್ರಥಮ ಸ್ಥಾನದಲ್ಲೇ ಇದ್ದರು. ಆಗ 70% ಅಂಕ ಗಳಿಸಿದ್ದ ಅವರು ಈ ಬಾರಿ 71% ಅಂಕ ಪಡೆದಿದ್ದಾರೆ.
2020ರ ಮೇ ತಿಂಗಳಿನಲ್ಲಿ ಕೊರೋನಾ ಲಾಕ್‌ಡೌನ್ ಅವಧಿಯಲ್ಲಿ ಮೋದಿ ಅವರು 84% ಅಂಕಗಳೊಂದಿಗೆ ಪ್ರಥಮ ಸ್ಥಾನದಲ್ಲಿದ್ದರು. ಕೊರೋನಾ (Coronavirus) ಎರಡನೇ ಅಲೆ ಕಂಡುಬಂದ 2021ರ ಮೇ ತಿಂಗಳಿನಲ್ಲಿ ಅವರ ಜನಪ್ರಿಯತೆ ಶೇ.63 ಅಂಕಗಳಿಗೆ ಕುಸಿದಿತ್ತಾದರೂ ನಂ.1 ಪಟ್ಟಕ್ಕೆ ಭಂಗವಾಗಿರಲಿಲ್ಲ. ಇದೀಗ ಅಂಕ ಮತ್ತೆ ಏರಿಕೆಯಾಗಿದೆ.