ಬೆಚ್ಚಿ ಬಿದ್ದಿದೆ ಭಯೋತ್ಪಾದಕರ ಹೆಡ್ ಕ್ವಾರ್ಟರ್! ನೆತನ್ಯಾಹು ರೀತಿಯಲ್ಲೇ ನೆತ್ತರ ಸೀಳಿ ಉತ್ತರ ಕೊಡ್ತಾರಾ ಮೋದಿ?

ಪಹಲ್ಗಾಮ್ ನರಮೇಧದ ನಂತರ, ಭಾರತವು ಪಾಕಿಸ್ತಾನದ ವಿರುದ್ಧ ಪ್ರತೀಕಾರಕ್ಕೆ ಸಜ್ಜಾಗಿದೆ. ರಾಜತಾಂತ್ರಿಕ ಕ್ರಮಗಳಿಂದ ಹಿಡಿದು ಯುದ್ಧ ತಾಲೀಮಿನವರೆಗೆ, ಉದ್ವಿಗ್ನ ಪರಿಸ್ಥಿತಿಯನ್ನು ವಿವರಿಸಲಾಗಿದೆ.

Share this Video
  • FB
  • Linkdin
  • Whatsapp

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದೂ ನರಮೇಧ ನಡೆಸಿ ಪರಾರಿ ಆಗಿರುವ ಪಾಕ್ ಬೆಂಬಲಿತ ಉಗ್ರಗಾಮಿಗಳ ಕೃತ್ಯದಿಂದ ಭಾರತ ದೇಶ ಹೆಡೆ ತುಳಿದ ಸರ್ಪದಂತಾಗಿದೆ. ಇದೀಗ ಭಾರತ ಉಗ್ರ ವಿನಾಶಕ್ಕೆ ಶಪಥ ಮಾಡಿದೆ. ಶುರುವಾಗಿದೆ ಶತ್ರು ಸಂಹಾರ ಯಜ್ಞ ಶುರುವಾಗಿದೆ. ಹಮಾಸ್ ಮಾದರಿಯಲ್ಲಿ ನಡೆದ ಉಗ್ರದಾಳಿಗೆ ನೆತನ್ಯಾಹು ರೀತಿಯಲ್ಲೇ ನೆತ್ತರ ಸೀಳುವ ಉತ್ತರ ಕೊಡ್ತಾರಾ ಮೋದಿ? ಎಂಬುದು ಎಲ್ಲರ ಕಾತುರವಾಗಿದೆ. ಇದು 120 ಕೋಟಿ ಭಾರತೀಯರ ಪ್ರತೀಕಾರದ ಪ್ರತಿಜ್ಞೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಯುದ್ಧ ತಾಲೀಮು ಶುರುವಾಗಿದೆ. ಈಗ ಪರಿಸ್ಥಿತಿ ಪ್ರಕ್ಷುಬ್ಧವಾಗ್ತಿದೆ. ಕಲ್ಪನೆಗೂ ಮೀರಿದ ಶಿಕ್ಷೆ ಕಾದಿದೆ ಎಂದು ನರೇಂದ್ರ ಮೋದಿ ಘರ್ಜಿಸುವ ಮೂಲಕ ಪಾಕಿಸ್ತಾನಕ್ಕೆ ವಾರ್ನಿಂಗ್ ಕೊಟ್ಟಿದ್ದಾರೆ. ಈ ಎಲ್ಲದರಿಂದಾಗಿ ಭಯೋತ್ಪಾದಕರ ಹೆಡ್ ಕ್ವಾರ್ಟರ್ ಪಾಕಿಸ್ತಾನ ಬೆಚ್ಚಿ ಬಿದ್ದಿದೆ.

Add Asianetnews Kannada as a Preferred SourcegooglePreferred

ಉಗ್ರದಾಳಿಯ ಬೆನ್ನಲ್ಲೆ ಪಾಕಿಸ್ತಾನಕ್ಕೆ ಭಾರತ ಮೊದಲು ಕೊಟ್ಟಿದ್ದು ರಾಜತಾಂತ್ರಿಕತೆಯ ಏಟು.. ಹಾಗಿದ್ರೆ ಆ ಏಟು ಪಾಕಿಸ್ತಾನಕ್ಕೆ ಯಾವ ಮಟ್ಟಿಗಿನ ಸಂಕಷ್ಟ ತಂದಿಡುತ್ತೆ ಅನ್ನೋದನ್ನ ತೋರಿಸ್ತೀವಿ. ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ಶುರುವಾಗಿದೆ. ಇದು ರಾಜತಾಂತ್ರಿಕ ಯುದ್ಧ. ಪಾಕಿಸ್ತಾನಕ್ಕೆ ಗಾಯದ ಮೇಲೆ ಬರೆ ಎಳೆಯುವಂತಹ ನಿರ್ಧಾರಗಳನ್ನ ಭಾರತ ತೆಗೆದುಕೊಂಡಿದೆ. ಪಾಕಿಸ್ತಾನದ ವಿರುದ್ಧ ಭಾರತ ತೆಗೆದುಕೊಂಡಿರೋ ಅದೊಂದು ಕ್ರಮ ಭಿಕಾರಿಯಾಗಿರೋ ಪಾಕಿಸ್ತಾನಕ್ಕೆ ಬರೆ ಹಾಕಿದ ಹಾಗಾಗಿದೆ. ಭಾರತ ಜಲಯುಧ ತೆಗೆದು ಪಾಕಿಸ್ತಾನದ ಮೇಲೆ ಪ್ರಹಾರ ಮಾಡಿದೆ. ಹಾಗಿದ್ರೆ ಆ ಜಲಾಯುಧ ಯಾವುದು, ಅದ್ರಿಂದ ಪಾಕಿಸ್ತಾನಕ್ಕೆ ಬೀಳುವಂತಹ ಪೆಟ್ಟು ಎಂಥದ್ದು? ಇಲ್ಲಿದೆ ನೋಡಿ.

Related Video