ಮೂರನೇ ಲಾಕ್‌ಡೌನ್ ವಿಸ್ತರಣೆ ಫಿಕ್ಸ್ ಆದ್ರೆ ಹಲವೆಡೆ ರಿಲಾಕ್ಸ್..!

ಎಲ್ಲಾ ರಾಜ್ಯಗಳ ಮುಖ್ಯಕಾರ್ಯದರ್ಶಿಗಳಿಗೆ ಹಸಿರು, ಕಿತ್ತಳೆ, ಕೆಂಪು ಜಿಲ್ಲೆಗಳ ಪರಿಷ್ಕರಣೆ ಮಾಡುವಂತೆ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಈಗಾಗಲೇ 130 ಕೆಂಪು, 284 ಕಿತ್ತಳೆ ಹಾಗೂ 319 ಹಸಿರು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ.

First Published May 1, 2020, 1:55 PM IST | Last Updated May 1, 2020, 2:32 PM IST

ಬೆಂಗಳೂರು(ಮೇ.01): ಎರಡನೇ ಹಂತದ ಲಾಕ್‌ಡೌನ್ ಮುಕ್ತಾಯಕ್ಕೆ ಇನ್ನೆರಡೇ ದಿನ ಬಾಕಿ ಇದೆ. ಹೀಗಿರುವಾಗಲೇ ಮೋದಿ ಸರ್ಕಾರ ಲಾಕ್‌ಡೌನ್ 3.0ಗೆ ಹೊಸ ತಂತ್ರ ರೂಪಿಸಲು ಸಜ್ಜಾಗಿದೆ. ಪ್ರಧಾನಿ ಮೋದಿ ಹೊಸ ಸ್ಟ್ರಾಟರ್ಜಿ ರೂಪಿಸುವ ಸಾಧ್ಯತೆಯಿದೆ. 

ಎಲ್ಲಾ ರಾಜ್ಯಗಳ ಮುಖ್ಯಕಾರ್ಯದರ್ಶಿಗಳಿಗೆ ಹಸಿರು, ಕಿತ್ತಳೆ, ಕೆಂಪು ಜಿಲ್ಲೆಗಳ ಪರಿಷ್ಕರಣೆ ಮಾಡುವಂತೆ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಈಗಾಗಲೇ 130 ಕೆಂಪು, 284 ಕಿತ್ತಳೆ ಹಾಗೂ 319 ಹಸಿರು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ.

ಬೆಂಗಳೂರಿಗೆ ಡಬಲ್ ಟೆನ್ಷನ್: ಪಾದರಾಯನಪುರ, ಹೊಂಗಸಂದ್ರ ಕಂಟಕ?

ಮೇ.03ಕ್ಕೆ ಎರಡನೇ ಲಾಕ್‌ಡೌನ್‌ ಮುಕ್ತಾಯವಾಗಲಿದ್ದು, ಆ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೂರನೇ ಹಂತದ ಲಾಕ್‌ಡೌನ್ ಘೋಷಿಸುವ ಸಾಧ್ಯತೆ ದಟ್ಟವಾಗತೊಡಗಿದೆ. ಆದರೆ ಹಸಿರು ಝೋನ್‌ನಲ್ಲಿರುವವರಿಗೆ ಮತ್ತಷ್ಟು ರಿಲ್ಯಾಕ್ಸ್ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Video Top Stories