ಕೊರೋನಾ ಎಕ್ಸ್‌ಪ್ರೆಸ್: ಏಷ್ಯಾದಲ್ಲೇ ಭಾರತಕ್ಕೆ ಅಗ್ರಸ್ಥಾನ..!
ಕೊರೋನಾ ದೇಶವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಇದೀಗ ಭಾರತ ಏಷ್ಯಾದ ಹೊಸ ಕೊರೋನಾ ಹಾಟ್‌ಸ್ಪಾಟ್ ಆಗಿ ಬದಲಾಗಿದೆ. ಇನ್ನು ಅತಿಹೆಚ್ಚು ಕೊರೋನಾ ಪೀಡಿತರ ಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಜಿಗಿದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಮೇ.28): ದಿನದಿಂದ ದಿನಕ್ಕೆ ಕೊರೋನಾ ಹೆಮ್ಮಾರಿಯ ದೇಶದಲ್ಲಿ ರಣಕೇಕೆ ಮುಂದುವರೆಯುತ್ತಲೇ ಇದೆ. ಜಗತ್ತಿನ ಅತಿಹೆಚ್ಚು ಕೋವಿಡ್ 19 ಸೋಂಕಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 9ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.
ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಒಂದುವರೆ ಲಕ್ಷದ ಗಡಿದಾಟಿದೆ. ಈ ಮೂಲಕ ಏಷ್ಯಾ ಖಂಡದಲ್ಲಿ ಅತಿಹೆಚ್ಚು ಸೋಂಕಿತರನ್ನು ಹೊಂದಿದ ರಾಷ್ಟ್ರ ಎನ್ನುವ ಕುಖ್ಯಾತಿಗೆ ಒಳಗಾಗಿದೆ. ಸ್ಯಾನಿಟೈಸರ್, ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಂಡರಷ್ಟೇ ಆದಷ್ಟು ಕೊರೋನಾದಿಂದ ಬಚಾವಾಗಲು ಉಳಿದಿರುವ ಮಾರ್ಗವಾಗಿದೆ.
ಇದಿಷ್ಟು ಒಂದು ಕಡೆಯಾದರೆ ಮತ್ತೊಂದೆಡೆ ಸರ್ಕಾರ ಕ್ವಾರಂಟೈನ್‌ನಲ್ಲಿರುವವರಿಗೆ ಸರಿಯಾದ ಊಟದ ವ್ಯವಸ್ಥೆಯನ್ನು ಮಾಡುತ್ತಿಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ ರಾಯಚೂರಿನ ಕ್ವಾರಂಟೈನ್‌ನಲ್ಲಿ ಊಟದಲ್ಲಿ ಹುಳಗಳು ಪತ್ತೆಯಾಗಿವೆ. ಈ ಊಟ ತಿನ್ನುವವರನ್ನು ದೇವರೇ ಕಾಪಾಡಬೇಕು. ಇನ್ನಷ್ಟು ಕೊರೋನಾ ಸಂಬಂಧಿತ ಸುದ್ದಿಗಳು ಕೊರೋನಾ ಎಕ್ಸ್‌ಪ್ರೆಸ್‌ನಲ್ಲಿವೆ ನೋಡಿ.