News Hour: ಐದು ವರ್ಷಗಳ ಬಳಿಕ ನಡೆಯಿತು ಭಾರತ-ಚೀನಾ ದ್ವಿಪಕ್ಷೀಯ ಮಾತುಕತೆ

ಭಾರತ ಹಾಗೂ ಚೀನಾ ದೇಶಗಳ ನಡುವೆ ಐದು ವರ್ಷಗಳ ಬಳಿಕ ಬ್ರಿಕ್ಸ್‌ ಶೃಂಗಸಭೆಯ ನಡುವೆ ದ್ವಿಪಕ್ಷೀಯ ಮಾತುಕತೆ ನಡೆದಿದೆ. ಗಲ್ವಾನ್‌ ಸಂಘರ್ಷದ ಬಳಿಕ ಭಾರತ ಹಾಗೂ ಚೀನಾ ಪರಸ್ಪರ ಮಾತುಕತೆಗೆ ಇಳಿದಿರಲಿಲ್ಲ.
 

First Published Oct 23, 2024, 11:12 PM IST | Last Updated Oct 23, 2024, 11:12 PM IST

ಬೆಂಗಳೂರು (ಅ.23): ರಷ್ಯಾದಲ್ಲಿ ಭಾರತ ಚೀನಾ ಮಧ್ಯೆ ದ್ವಿಪಕ್ಷೀಯ ಮಾತುಕತೆ ನಡೆದಿದೆ. ಐದು ವರ್ಷದ ಬಳಿಕ ಮೋದಿ, ಜಿನ್‌ಪಿಂಗ್‌ಮುಖಾಮುಖಿಯಾಗಿದ್ದಾರೆ. ಉಭಯ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.

ನಿಮ್ಮ ಭೇಟಿಯಿಂದ ತುಂಬಾ ಸಂತೋಷವಾಗಿದೆ. 5 ವರ್ಷಗಳ ಬಳಿಕ ಮೊದಲ ಬಾರಿಗೆ ಔಪಚಾರಿಕ ಸಭೆ ನಡೆಯುತ್ತಿದೆ. ಭಾರತ-ಚೀನಾ ಸಂಬಂಧ ನಮ್ಮ ಜನರಿಗೆ ಅಷ್ಟೇ ಮುಖ್ಯವಲ್ಲ. ಜಾಗತಿಕವಾಗಿಯೂ ಮುಖ್ಯ  ಎಂದು ನಂಬುತ್ತೇವೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

1.15 ಕೋಟಿಯ ಚಿನ್ನ, 12 ಕೋಟಿ ಆಸ್ತಿ, ಶಿಮ್ಲಾದಲ್ಲಿ ಬಂಗಲೆ: ಇದು ಪ್ರಿಯಾಂಕಾ ವಾದ್ರಾ ಆಸ್ತಿ

ಶಾಂತಿ, ಸ್ಥಿರತೆ, ಪ್ರಗತಿಯನ್ನು ನಾವು ಸ್ವಾಗತಿಸುತ್ತೇವೆ. ಗಡಿಯಲ್ಲಿ ಕಳೆದ 4 ವರ್ಷಗಳಿಂದ ಉದ್ಭವಿಸಿದ ಸಮಸ್ಯೆ, ಬಗೆಹರಿಸಿಕೊಳ್ಳಲು ಒಮ್ಮತದ ಸಹಕಾರವನ್ನು ಸ್ವಾಗತಿಸುತ್ತೇವೆ. ಗಡಿಯಲ್ಲಿ ಶಾಂತಿ-ಸ್ಥಿರತೆ  ಕಾಪಾಡಿಕೊಳ್ಳಲು ಬಯಸ್ತೇವೆ ಎಂದು ಹೇಳಿದ್ದಾರೆ.