ಜೈ ಶ್ರೀರಾಮ್ ಹೇಳಂಗಿಲ್ಲ, ಕೇವಲ ಅಲ್ಲಾಹು ಅಕ್ಬರ್ ಮಾತ್ರ, ಬೆಂಗಳೂರಲ್ಲಿ ಯವಕರ ವಾರ್ನಿಂಗ್!

ದೇಶಾದ್ಯಂತ ರಾಮನವಮಿ ಸಂಭ್ರಮ, ಆಯೋಧ್ಯೆಯಲ್ಲಿ ಬಾಲರಾಮನಿಗೆ ಸೂರ್ಯತಿಲಕ, ಬೆಂಗಳೂರಿನಲ್ಲಿ ಮುಸ್ಲಿಮ್ ಯುನಕರಿಂದ ಜೈಶ್ರೀರಾಮ್ ಘೋಷಣೆ ಕೂಗಂಗಿಲ್ಲ, ಕೇವಲ ಅಲ್ಲಾಹು ಅಕ್ಬರ್ ಎಂದು ವಾರ್ನಿಂಗ್, ಕರ್ನಾಟಕದಲ್ಲಿ ರಾಹುಲ್ ಗಾಂಧಿ ಭರ್ಜರಿ ಪ್ರಚಾರ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

Share this Video
  • FB
  • Linkdin
  • Whatsapp

ದೇಶದೆಲ್ಲೆಡೆ ರಾಮನವಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಆಯೋಧ್ಯೆಯಲ್ಲಿ ಸೂರ್ಯನ ಕಿರಣಗಳು ಬಾಲರಾಮನ ಸ್ಪರ್ಶಿಸಿದರೆ, ದೇಶದ ವಿವಿದೆ ಇರುವ ಶ್ರೀರಾಮ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿದೆ. ಇದರ ನಡುವೆ ಬೆಂಗಳೂರಿನಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ರಾಮನವಮಿ ಮುಗಿಸಿ ಕಾರಿನಲ್ಲಿ ಸಹಕಾರನಗರಿಂದ ಎಂಎಸ್ ಪಾಳ್ಯಗೆ ತೆರಳುತ್ತಿದ್ದ ಹಿಂದೂ ಯುವಕರನ್ನು ವಿದ್ಯಾರಣ್ಯಪುರ ಚಿಕ್ಕಬೆಟ್ಟನಹಳ್ಳಿ ಮಸೀದಿ ಬಳಿ ಅಡ್ಡಗಟ್ಟಿದ್ದ ಮುಸ್ಲಿಮ್ ಯುವಕರು ವಾರ್ನಿಂಗ್ ಮಾಡಿ ಹಲ್ಲೆ ಮಾಡಿದ್ದಾರೆ. ಕಾರಿಗೆ ಜೈಶ್ರೀರಾಮ್ ಬಾವುಟ ಕಟ್ಟಿ ತೆರಳುತ್ತಿದ್ದ ಕಾರಣ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಯುವಕರು ಹೇಳಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈಯುತ್ತಿರುವ ಹಾಗೂ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದೆ.

Related Video