ಯೋಧರ ಜೊತೆ ಮೋದಿ ದೀಪಾವಳಿ, ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ!
ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದ ಜೈಸಲ್ಮೇರ್ ಗಡಿಯಲ್ಲಿ ಶನಿವಾರ ಭಾರತೀಯ ಸೈನಿಕರೊಂದಿಗೆ ದೀಪಾವಳಿ ಆಚರಿಸಿದರು. ಪ್ರಧಾನಿ ಮೋದಿಯನ್ನು ಹೊತ್ತ ವಾಯುಪಡೆಯ ವಿಶೇಷ ವಿಮಾನ ಶನಿವಾರ ಬೆಳಿಗ್ಗೆ 9:15ಕ್ಕೆ ಜೈಸಲ್ಮೇರ್ ನ ವಾಯುಪಡೆಯ ವಿಮಾನ ನಿಲ್ದಾಣದಲ್ಲಿ ತಲುಪಿತು. ಪ್ರಧಾನಿ ಅವರೊಂದಿಗೆ ಸಿಡಿಎಸ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಇದ್ದರು.]
ಜೈಪುರ(ನ.14): ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದ ಜೈಸಲ್ಮೇರ್ ಗಡಿಯಲ್ಲಿ ಶನಿವಾರ ಭಾರತೀಯ ಸೈನಿಕರೊಂದಿಗೆ ದೀಪಾವಳಿ ಆಚರಿಸಿದರು. ಪ್ರಧಾನಿ ಮೋದಿಯನ್ನು ಹೊತ್ತ ವಾಯುಪಡೆಯ ವಿಶೇಷ ವಿಮಾನ ಶನಿವಾರ ಬೆಳಿಗ್ಗೆ 9:15ಕ್ಕೆ ಜೈಸಲ್ಮೇರ್ ನ ವಾಯುಪಡೆಯ ವಿಮಾನ ನಿಲ್ದಾಣದಲ್ಲಿ ತಲುಪಿತು. ಪ್ರಧಾನಿ ಅವರೊಂದಿಗೆ ಸಿಡಿಎಸ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಇದ್ದರು.
ರಾಜಸ್ಥಾನದ ಲಾಂಗ್‌ವಾಲಾ ಪೋಸ್ಟ್‌ನಲ್ಲಿ ಸೈನಿಕರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, "ದೇಶದಲ್ಲಿ ಯಾರಾದರೂ ಒಂದು ಪೋಸ್ಟ್‌ನ ಹೆಸರನ್ನು ನೆನಪಿಸಿಕೊಳ್ಳುವುದಾದರೆ, ಅದು ಲಾಂಗ್‌ವಾಲಾ ಪೋಸ್ಟ್ ಆಗಿದೆ. ಈ ಪೋಸ್ಟ್‌ನಲ್ಲಿ ನಿಮ್ಮ ಸಹೋದ್ಯೋಗಿಗಳು ಅಂತಹ ಶೌರ್ಯವನ್ನು ಬರೆದಿದ್ದಾರೆ, ಜನರು ಅದನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ ಮಿಲಿಟರಿ ಕೌಶಲ್ಯದ ಇತಿಹಾಸವನ್ನು ಬರೆದಾಗಲೆಲ್ಲಾ ಲಾಂಗ್‌ವಾಲಾ ಕದನವನ್ನು ನೆನಪಿಸಿಕೊಳ್ಳಲಾಗುತ್ತದೆ' ಎಂದು ಹೇಳಿದರು.