ಕಿಂಗ್ ಆಗಲ್ಲ ಕಿಂಗ್ ಮೇಕರ್ ಆಗಲು ಹೊರಟ ಸೂಪರ್ ಸ್ಟಾರ್..!
ರಾಜಕೀಯಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅಧಿಕೃತವಾಗಿ ಎಂಟ್ರಿಕೊಟ್ಟಿದ್ದು, ಗುರುವಾರ ಚೆನ್ನೈನಲ್ಲಿ ಕಾರ್ಯಕರ್ತರ ಜೊತೆ ಸಂವಾದ ನಡೆಸಿದರು.
ಚೆನ್ನೈ, [ಮಾ.12]: ರಾಜಕೀಯಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅಧಿಕೃತವಾಗಿ ಎಂಟ್ರಿಕೊಟ್ಟಿದ್ದು, ಗುರುವಾರ ಚೆನ್ನೈನಲ್ಲಿ ಕಾರ್ಯಕರ್ತರ ಜೊತೆ ಸಂವಾದ ನಡೆಸಿದರು.
ಬಿಸಿನೆಸ್ ಆಗಿರೋ ಪ್ರಸ್ತುತ ರಾಜಕೀಯ ಬದಲಾಗಬೇಕಿದೆ. ಪ್ರಾಮಾಣಿಕ, ಯುವ, ಶಿಕ್ಷಿತ ಪಕ್ಷ ಬೇಕಿದೆ. ಏಕ ನಾಯಕ ರಾಜಕೀಯ ಬದಲಾಗಬೇಕು. ನಾನು ಪಕ್ಷದ ಅಧ್ಯಕ್ಷನಾಗ್ತೇನೆ ಆದ್ರೆ ಸಿಎಂ ಆಗೋ ಬಯಕೆ ಇಲ್ಲ ಎಂದು ಹೇಳುವ ಮೂಲಕ ಕಿಂಗ್ ಆಗಲ್ಲ, ಕಿಂಗ್ ಮೇಕರ್ ಆಗ್ತೀನಿ ಎನ್ನುವ ಅರ್ಥದಲ್ಲಿ ಹೇಳಿದಂತಿದೆ.