ದೇಶವನ್ನೇ ಕಂಗೆಡಿಸಿತ್ತು ರಣ ಬೇಟೆಗಾರನ ಅಗ್ನಿದುರಂತ! 3 ವರ್ಷಗಳ ನಂತರ ಹೊರ ಬಂತು ಭಯಾನಕ ಸತ್ಯ!
ದೇಶಕಂಡ ಅಪ್ರತಿಮ ಸೇನಾಧಿಕಾರಿ ಬಿಪಿನ್ ರಾವತ್ ಅವರ ಅಕಾಲಿಕ ಮರಣದ ಹಿಂದಿನ ಕಾರಣವನ್ನು ಬಹಿರಂಗಪಡಿಸಲಾಗಿದೆ. ಮೂರು ವರ್ಷಗಳ ಹಿಂದೆ ಸಂಭವಿಸಿದ ಈ ದುರಂತದ ಬಗ್ಗೆ ಸುತ್ತುವರೆದಿರುವ ಅನುಮಾನಗಳಿಗೆ ಈಗ ಉತ್ತರ ಸಿಕ್ಕಿದೆ.
ಸರಿಯಾಗಿ ಮೂರು ವರ್ಷಗಳ ಹಿಂದೆ ನಾವೂ ನೀವೂ ಒಂದು ಮಹಾದುರಂತದ ಸುದ್ದಿ ಕೇಳಿದ್ವಿ. ದೇಶಕಂಡ ಅಪರೂಪದ ಸೇನಾಧಿಕಾರಿ, ಎಂಟೆದೆ ಬಂಟ, ಬಿಪಿನ್ ರಾವತ್ ಅನ್ನೋ ಧೀರ ರಾಷ್ಟ್ರ ಭಕ್ತನನ್ನ ಕಳ್ಕೊಂಡ್ವಿ. ಆದ್ರೆ ಆ ಸಾವಿಗೆ ಕಾರಣ ಏನು ಅನ್ನೋದು ಈಗ ಹೊರಬಂದಿದೆ. ಅವತ್ತು ಮೂಡಿದ್ದ ಅನುಮಾನಗಳಿಗೆಲ್ಲಾ ಈಗ ಉತ್ತರ ಸಿಕ್ಕಿದೆ. ಅಷ್ಟಕ್ಕೂ ಅವತ್ತು ಆಗಿದ್ದೇನು? ಆ ದುರಂತ ಸಂಭವಿಸಿದ್ದು ಹೇಗೆ?
ಬಿಪಿನ್ ರಾವತ್ ಅಂದ್ರೆ ಅದು ಬರೀ ವ್ಯಕ್ತಿಯ ಹೆಸರಲ್ಲ, ಅದೇ ಒಂದು ಶಕ್ತಿಯಾಗಿತ್ತು. ಶತ್ರುಗಳ ಕ್ಷುದ್ರವ್ಯೂಹವನ್ನೆಲ್ಲಾ ಬೇಧಿಸೋ ಎದೆಗಾರಿಕೆ ಅವರಿದಿತ್ತು. ರಾವತ್ ಇದಾರೆ ಅನ್ನೋ ಒಂದೇ ಕಾರಣಕ್ಕೇ, ದೊಡ್ಡ ದೊಡ್ಡ ದೇಶಗಳು ಬಾಲ ಬಿಚ್ಚೋದಕ್ಕೂ ಹಿಂದೆ ಮುಂದೆ ನೋಡ್ತಾ ಇದ್ವು. ಅಂಥವರ ಈ ದುರಂತ ಹೇಗಾಯ್ತು ಗೊತ್ತಾ? ಬಿಪಿನ್ ರಾವತ್ ಅವರು ಮರಣ ಹೊಂದಿದಾಗ, ದೇಶದ ತುಂಬಾ ಸಂದೇಹದ ಜ್ವಾಲೆಯೊಂದು ಹೊತ್ತಿಕೊಂಡಿತ್ತು. ಅನುಮಾನ ಮೂಡಿತ್ತು. ಆ ಅನುಮಾನಕ್ಕೆ, ಈ ವರದಿ ಉತ್ತರ ಕೊಟ್ಟಿದೆ. ಅಷ್ಟಕ್ಕೂ ಆ ಅನುಮಾನ ಏನು? ಇಲ್ಲಿದೆ ಉತ್ತರ.