Asianet Suvarna News Asianet Suvarna News

ಮೋದಿ ವಿರುದ್ಧ ಅಪಪ್ರಚಾರ, ಸಾಕ್ಷ್ಯ ಚಿತ್ರದ ಮೂಲಕ ಬ್ರಿಟಿಷ್ ಟಿವಿ ಹುನ್ನಾರ!

ಮೋದಿ ವಿರುದ್ಧ ಬಿಬಿಸಿ ಸಾಕ್ಷ್ಯಚಿತ್ರ ಪ್ರಸಾರ ಮಾಡಿದ ಬೆನ್ನಲ್ಲೇ ವಿಶ್ವದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಅದರಲ್ಲೂ ಹೆಚ್ಚಾಗಿ ಬ್ರಿಟನ್‌ನಲ್ಲಿ ಈ ಡಾಕ್ಯುಮೆಂಟರಿ ಹಾಗೂ ಚಿತ್ರದ ಪರ ಮಾತನಾಡುತ್ತಿರುವ ವಿರುದ್ಧ ಆಂದೋಲನ ನಡೆಯುತ್ತಿದೆ. ಹಾಗಾದರೆ ಬಿಬಿಸಿ ಸಾಕ್ಷ್ಯಚಿತ್ರದಲ್ಲಿ ಏನಿದೆ? 

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳಂಕ ಹಚ್ಚಲು ಬಿಬಿಸಿ ನಡೆಸಿದೆ ಹುನ್ನಾರ.. ಇದೆಂಥಾ ಷಡ್ಯಂತ್ರ? ಬ್ರಿಟಿಷ್ ಟಿವಿ ಡಾಕ್ಯುಮೆಂಟರಿ ಹೇಳಿದ್ದನ್ನ ಬ್ರಿಟನ್ ಪ್ರಧಾನಿ, ರಿಶಿ ಸುನಕ್ ಅವರೇ  ಒಪ್ಪಲಿಲ್ಲ.. ಅಂಥದ್ದೇನಿದೆ ಅದರಲ್ಲಿ? ಭಾರತದ ವಿರುದ್ಧ.. ಮೋದಿ ವಿರುದ್ಧ ಉರಿದು ಪದೇ ಪದೇ ಉರಿದು ಬೀಳ್ತಿರೋದೇಕೆ ವಿದೇಶಿ ಶಕ್ತಿಗಳು.? ಮೋದಿ ವಿರುದ್ಧ ಮುಸ್ಲಿಮರಿಗೆ ಅಸಮಾಧಾನವಿದೆ, ಭಾರತದಲ್ಲಿ ಅನ್ಯಾಯವಾಗ್ತಿದೆ ಅನ್ನೋ ಹಾಗೆ, ಬಿಬಿಸಿ ಒಂದು ಡಾಕ್ಯುಮೆಂಟರಿ ರೆಡಿ ಮಾಡಿ ಪ್ರಸಾರ ಮಾಡಿತ್ತು.. ಆಮೇಲೇನಾಯ್ತು?