Asianet Suvarna News Asianet Suvarna News

ಚೀನಾ ಸೇನೆಯ ಜೊತೆ ಈ ಕಂಪನಿಗಳ ಪರೋಕ್ಷ ನಂಟು; ಭಾರತಕ್ಕೆ ಸಂಕಷ್ಟ ಉಂಟು..!

ಪೂರ್ವ ಲಡಾಖ್‌ ಗಡಿಯಲ್ಲಿ ಭಾರತೀಯ ಯೋಧರ ಹತ್ಯೆಗೆ ಪ್ರತಿಯಾಗಿ ಚೀನಾದ 59 ಆ್ಯಪ್‌ಗಳನ್ನು ನಿಷೇಧಿಸಿದ ಬೆನ್ನಲ್ಲೇ, ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ) ಜೊತೆ ಪರೋಕ್ಷ ಸಂಬಂಧ ಹೊಂದಿರುವ ಜಾಗತಿಕ ದೈತ್ಯ ಕಂಪನಿ ಹುವೈ, ಅಲಿಬಾಬಾ ಸೇರಿ ಚೀನಾದ 7 ಕಂಪನಿಗಳ ವಿರುದ್ಧ ಭಾರತ ಕ್ರಮ ಜರುಗಿಸುವ ಸಾಧ್ಯತೆ ಇದೆ.
 

ಬೆಂಗಳೂರು (ಜು. 20): ಪೂರ್ವ ಲಡಾಖ್‌ ಗಡಿಯಲ್ಲಿ ಭಾರತೀಯ ಯೋಧರ ಹತ್ಯೆಗೆ ಪ್ರತಿಯಾಗಿ ಚೀನಾದ 59 ಆ್ಯಪ್‌ಗಳನ್ನು ನಿಷೇಧಿಸಿದ ಬೆನ್ನಲ್ಲೇ, ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ) ಜೊತೆ ಪರೋಕ್ಷ ಸಂಬಂಧ ಹೊಂದಿರುವ ಜಾಗತಿಕ ದೈತ್ಯ ಕಂಪನಿ ಹುವೈ, ಅಲಿಬಾಬಾ ಸೇರಿ ಚೀನಾದ 7 ಕಂಪನಿಗಳ ವಿರುದ್ಧ ಭಾರತ ಕ್ರಮ ಜರುಗಿಸುವ ಸಾಧ್ಯತೆ ಇದೆ.

ಕ್ಷಿಇಂಡಿಯಾ ಸ್ಟೀಲ್ಸ್‌, ಕ್ಸಿನ್ಸಿಂಗ್‌ ಕೆಥೆ ಇಂಟರ್‌ ನ್ಯಾಷನಲ್‌, ಚೀನಾ ಇಲೆಕ್ಟ್ರಾನಿಕ್‌ ಟೆಕ್ನಾಲಜಿ ಗ್ರೂಪ್‌, ಹುವೈ, ಅಲಿಬಾಬಾ, ಟೆನ್ಸೆಂಟ್‌ ಮತ್ತು ಎಸ್‌ಎಐಸಿ ಮೋಟಾರ್‌ ಕಾರ್ಪೊರೇಷನ್‌ ಕಂಪನಿಗಳ ಕಾರ್ಯಚಟುವಟಿಕೆಗಳ ಮೇಲೆ ಸರ್ಕಾರ ನಿಗಾ ವಹಿಸಿದೆ.

ಅಲಿಬಾಬಾ ಹಾಗೂ ಟೆನ್ಸೆಂಟ್‌ ಕಂಪನಿಗಳು ಚೀನಾ ಸೇನೆಯ ಕೃತಕ ಬುದ್ಧಿಮತ್ತೆ ಯೋಜನೆಗಳು, ಸೇನೆ ಹಾಗೂ ನಾಗರಿಕರ ಸಹಭಾಗಿತ್ವದ ಭಾಗವಾಗಿ ಕಾರ್ಯನಿರ್ವಹಿಸುತ್ತಿವೆ. ಅದರಂತೆ ಈ ಸಂಸ್ಥೆಗಳು ಚೀನಾದ ರಕ್ಷಣಾ ವಲಯಕ್ಕೆ ತಮ್ಮದೇ ಕೊಡುಗೆಯನ್ನು ನೀಡುತ್ತಿವೆ ಎಂದು ಮೂಲಗಳು ತಿಳಿಸಿವೆ.

ಚೀನಾಗೆ ಅವರದ್ದೇ ಭಾಷೆಯಲ್ಲಿ ಸಿಗಲಿದೆ ಉತ್ತರ, ITBP ಯಿಂದ ವಿಶೇಷ ತಯಾರಿ..!

Video Top Stories