ಭಾರತ ರತ್ನ ಘೋಷಣೆ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ಎಲ್‌ಕೆ ಅಡ್ವಾಣಿ!

ದೇಶ ವಿಭಜನೆಯಾದಾಗ ಕರಾಚಿಯಿಂದ ದೆಹಲಿಗೆ ಬಂದ ಅಡ್ವಾಣಿಯ ಹೋರಾಟದ ಜೀವನ, ರಾಜಕೀಯ ಪಿತೂರಿಗೆ ಬಲಿ, ಸಿಟಿ ರವಿ ಹೇಳಿಕೆಯಿಂದ ರಾಜಕೀಯ ತಲ್ಲಣ,ಕಾಂಗ್ರೆಸ್ 40 ಸ್ಥಾನ ಗೆಲ್ಲುವುದು ಕಷ್ಟ, ಮಮತಾ ಭವಿಷ್ಯಕ್ಕೆ ಕಾಂಗ್ರೆಸ್ ಗರಂ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

First Published Feb 3, 2024, 10:57 PM IST | Last Updated Feb 3, 2024, 10:57 PM IST

ಬಿಜೆಪಿ ಭೀಷ್ಮ, ಹಿರಿಯ ನಾಯಕ, ಮಾಜಿ ಉಪ ಪ್ರಧಾನಿ ಎಲ್‌ಕೆ ಅಡ್ವಾಣಿಗೆ ಭಾರತ ಸರ್ಕಾರ ಭಾರತ ರತ್ನ ಘೋಷಣೆ ಮಾಡಿದೆ. ಈ ನಿರ್ಧಾರಕ್ಕೆ ದೇಶಾದ್ಯಂತ ಸಂತಸ ವ್ಯಕ್ತವಾಗುತ್ತಿದೆ. ಇದೀಗ ಈ ಕುರಿತು ಸ್ವತಃ ಎಲ್‌ಕೆ ಅಡ್ವಾಣಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮೌಲ್ಯ ಹಾಗೂ ಸಿದ್ಧಾಂತಗಳಿಗೆ ಪ್ರಶಸ್ತಿ ಲಭಿಸಿದೆ ಎಂದಿದ್ದಾರೆ. ದೇಶ ವಿಭಜನೆಯಾದಾಗ ಕರಾಚಿಯಿಂದ ದೆಹಲಿಗೆ ವಲಸೆ ಬಂದ ಅಡ್ವಾಣಿ, ಆರ್‌ಎಸ್‌ಎಸ್ ಸೇವಕನಾಗಿ, ಬಿಜೆಪಿ ಕಾರ್ಯಕರ್ತನಾಗಿ, ನಾಯಕನಾಗಿ ಕಟ್ಟಿಬೆಳೆಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ರಾಮ ಮಂದಿರ ಆಂದೋಲನಕ್ಕೆ ಹೊಸ ಹುರುಪ ನೀಡಿದ ಕೀರ್ತಿ ಅಡ್ವಾಣಿಗೆ ಸಲ್ಲಲಿದೆ.

Video Top Stories