News Hour: ಭಾರತಕ್ಕೆ ವೈರಸ್.. ಎಲ್ಲೆಡೆ ಅಲರ್ಟ್!
ಎಚ್‌ಎಂಪಿ ವೈರಸ್ ದೇಶದಲ್ಲಿ ಕಾಣಿಸಿಕೊಂಡಿದೆ. ಅದರಲ್ಲೂ ಬೆಂಗಳೂರಿನಲ್ಲಿಯೇ ಎರಡು ಪ್ರಕರಣಗಳು ವರದಿಯಾಗಿದೆ. ಆದರೆ, ಕೇಂದ್ರ ಸರ್ಕಾರ ಜನ ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಬೆಂಗಳೂರು (ಜ.6): ಹೊಸ ವರ್ಷದ ಆರಂಭದಲ್ಲೇ ಚೀನಾ ವೈರಸ್ ಅಟ್ಟಹಾಸ ಮೆರೆದಿದೆ. ಬೆಂಗಳೂರು ಸೇರಿ ಭಾರತದಲ್ಲಿ ಒಂದೇ ದಿನ ನಾಲ್ವರಲ್ಲಿ ಸೋಂಕು ದೃಢವಾಗಿದೆ. ಅಪಾಯಕಾರಿ ಅಲ್ಲ.. ಅಲರ್ಟ್ ಆಗಿರಲು ಸಲಹೆ ನೀಡಲಾಗಿದೆ.
ಇನ್ನೊಂದೆಡೆ, ಕಾಂಗ್ರೆಸ್ ಸರ್ಕಾರಕ್ಕೆ ಕಮಿಷನ್ ಅಸ್ತ್ರ ಯೂಟರ್ನ್ ಆಗಿದೆ. ಇದು 60 ಪರ್ಸೆಂಟ್ ಸರ್ಕಾರ ಎಂದು ಕುಮಾರಸ್ವಾಮಿ ಬಾಂಬ್ ಹಾಕಿದ್ದಾರೆ. ಆರೋಪ ಬೇಡ.. ದಾಖಲೆ ಕೊಡಿ ಎಂದು ಸಿಎಂ ಸವಾಲ್ ಎಸೆದಿದ್ದಾರೆ.
News Hour: ಖರ್ಗೆ ಕೋಟೆಯಲ್ಲಿ ‘ರಾಜೀನಾಮೆ’ ಸಮರ
ಇನ್ನು ಡಿಕೆಶಿ ನೇತೃತ್ವದಲ್ಲಿ ದೆಹಲಿ ಚುನಾವಣೆಗೆ ಕಾಂಗ್ರೆಸ್ ಕಹಳೆ ಊದಿದೆ. ಕರ್ನಾಟಕದ ಗೃಹಲಕ್ಮೀ ಮಾದರಿಯಲ್ಲೇ ಗ್ಯಾರಂಟಿ ಘೋಷಣೆ ಮಾಡಲಾಗಿದೆ. ಪ್ಯಾರಿದೀದಿ ಹೆಸರಲ್ಲಿ ಪ್ರತಿ ಮಹಿಳೆಗೆ 2500 ರೂಪಾಯಿ ನೀಡುತ್ತೇವೆ ಎಂದು ಹೇಳಿದೆ.