Asianet Suvarna News Asianet Suvarna News

ಗೋರಖ್‌ಪುರ ದೇಗುಲದ ಮೇಲೆ ದಾಳಿ, ಶಾಕಿಂಗ್ ರಹಸ್ಯ ಬಾಯ್ಬಿಟ್ಟ ಅಹ್ಮದ್‌ ಮುರ್ತಜಾ!‌

ಗೋರಖ್‌ಪುರ ದೇಗುಲ ದಾಳಿಗೆ ಹಿಜಾಬ್ ಕಿಚ್ಚು ಹಚ್ಚಿದ್ದು ಹೇಗೆ? ದೇವಸ್ಥಾನಕ್ಕೆ ನುಗ್ಗಿದ್ದ ಒಂಟಿ ತೋಳ ಆ ಉಗ್ರರಿಗೆ ದುಡ್ಡು ಕೊಟ್ಟಿದ್ದನಾ? ಯೋಗಿಯ ದೇವಸ್ಥಾನಕ್ಕೂ, ಹಿಜಾಬ್ ಗಲಾಟೆಗೂ ಏನು ಸಂಬಂಧ?

First Published Apr 9, 2022, 5:16 PM IST | Last Updated Apr 9, 2022, 5:16 PM IST

ಲಕ್ನೋ(ಏ.09): ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಖ್ಯ ಅರ್ಚಕರಾಗಿರುವ ಗೋರಖ್‌ಪುರದ ದೇಗುಲಕ್ಕೆ (Gorakhnath temple) ಹರಿತವಾದ ಆಯುಧದೊಂದಿಗೆ ಒಳನುಗ್ಗಿ ಭದ್ರತಾ ಸಿಬ್ಬಂದಿಗಳನ್ನು ಗಾಯಗೊಳಿಸಿದ ಘಟನೆ ಭಾನುವಾರ ರಾತ್ರಿ ನಡೆದಿತ್ತು. ಅಹ್ಮದ್‌ ಮುರ್ತಾಜಾ (Ahmed Murtaza)ಎಂಬಾತನೇ ಹೀಗೆ ಆಯುಧದೊಂದಿಗೆ ದೇಗುಲಕ್ಕೆ ನುಗ್ಗಿದ ವ್ಯಕ್ತಿ. ಈತ ಐಐಟಿ ಬಾಂಬೆಯ ಪದವೀಧರ ಎಂದು ತಿಳಿದು ಬಂದಿದೆ.

ಇಬ್ಬರು ಪ್ರಾಂತೀಯ ಸಶಸ್ತ್ರ ಪಡೆ ಯೋಧರನ್ನು ಹರಿತವಾದ ಆಯುಧದಿಂದ ಗಾಯಗೊಳಿಸಿದ ಈತ, ಭಾನುವಾರ ರಾತ್ರಿ ಗೋರಖನಾಥ ದೇಗುಲಕ್ಕೆ ಬಲವಂತವಾಗಿ ಪ್ರವೇಶಿಸಲು ಯತ್ನಿಸಿದ್ದ. 29 ವರ್ಷದ ಅಹ್ಮದ್ ಮುರ್ತಾಜಾ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) (Indian Institute of Technology (IIT) Bombay) ಬಾಂಬೆಯಿಂದ ಕೆಮಿಕಲ್ ಎಂಜಿನಿಯರಿಂಗ್ ವಿಷಯದಲ್ಲಿ ಪದವಿ ಪಡೆದಿದ್ದಾನೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.