harekala hajabba;ಪದ್ಮಶ್ರಿ ಪ್ರಶಸ್ತಿ ಪಡೆದು ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮನದಾಳ ಬಿಚ್ಚಿಟ್ಟ ಅಕ್ಷರ ಸಂತ!
ಕಿತ್ತಳೆ ಹಣ್ಣು ಮಾರಾಟ ಮಾಡಿ ಶಾಲೆ ನಿರ್ಮಿಸಿ ಅಕ್ಷರ ಉಣಬಡಿಸಿದ ಅಕ್ಷರ ಸಂತ ಹರೇಕಳ ಹಾಜಬ್ಬಗೆ ದೇಶದ ಅತ್ಯುನ್ನತ ಪದ್ಮಶ್ರಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಪ್ರಶಸ್ತಿ ಪಡೆದು ಹೊರಬಂದ ಹಾಜಬ್ಬ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮನದಾಳ ಬಿಚ್ಚಿಟ್ಟಿದ್ದಾರೆ. ಈ ವೇಳೆ ಕನ್ನಡಿಗರಿಗೆ, ದೇಶಕ್ಕೆ ಮೊದಲು ಪರಚಿಯಿಸಿದ ಏಷ್ಯಾನೆಟ್ ಸುವರ್ಣನ್ಯೂಸ್ ಸಹೋದರ ಸಂಸ್ಥೆ ಕನ್ನಡ ಪ್ರಭಗೆ ಧನ್ಯವಾದ ಹೇಳಿದರು.
ನವ ದೆಹಲಿ(ನ.08): ಏಷ್ಯಾನೆಟ್ ಸುವರ್ಣನ್ಯೂಸ್ ಸಹೋದರ ಸಂಸ್ಥೆ ಕನ್ನಡ ಪ್ರಭ ಗುರುತಿಸಿದ ವರ್ಷದ ವ್ಯಕ್ತಿ ಅಕ್ಷರ ಸಂತ ಹಜನಬ್ಬ ಅವರಿಗೆ ಇಂದು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ರಾಮನಾಥ್ ಕೋವಿಂದ್ ಪ್ರಶಸ್ತಿ ನೀಡಿದರು. ಬಳಿಕ ನಮ್ಮ ಪ್ರತಿನಿಧಿ ಡೆಲ್ಲಿ ಮಂಜು ಜೊತೆ ಮಾತನಾಡಿದ ಹಜನಬ್ಬ, ಕನ್ನಡಪ್ರಭ ಪತ್ರಿಕೆ ದೇಶಕ್ಕೆ ಮೊದಲು ಪರಿಚಯಿಸಿತು. ನಾನು ಪತ್ರಿಕೆ ಧನ್ಯವಾದ ಆರ್ಪಿಸುತ್ತೇನೆ. ಪ್ರಧಾನಿಗಳು, ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದಿದ್ದು ಗೌರವದ ವಿಷಯ. ಪ್ರಧಾನಿಯವರಿಗೂ ನನ್ನ ಮನವಿ ಕನ್ನಡ ಶಾಲೆ, ಕಾಲೇಜು ಉಳಿಸಿ ಎಂದರು.