ಮಸೀದಿಯೊಳಗೆ ತ್ರಿಶೂಲ ಹೇಗೆ? ಯೋಗಿ ಆದಿತ್ಯನಾಥ್ ಹೇಳಿಕೆಯಿಂದ ಜ್ಞಾನವ್ಯಾಪಿಗೆ ಹೊಸ ತಿರುವು!
ಆಯೋಧ್ಯೆ ರೀತಿ ಇದೀಗ ಕಾಶಿ ಸ್ವರೂಪ ಪಡೆದುಕೊಂಡಿದೆ. ಜ್ಞಾನವ್ಯಾಪಿ ಮಸೀದಿ ಹೋರಾಟ ತೀವ್ರಗೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಇದಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿದ ಹೇಳಿಕೆ.
ಜ್ಞಾನವ್ಯಾಪಿ ಮಸೀದಿ ವಿವಾದ ನ್ಯಾಯಲಯದಲ್ಲಿರುವಾಗಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿರುವ ಹೇಳಿಕೆ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಈ ಹಿಂದೆ ಆಗಿರುವ ತಪ್ಪುಗಳನ್ನು ಸರಿಮಾಡುವ ಪ್ರಸ್ತಾವನೆಯನ್ನು ಮುಸ್ಲಿಂ ಸಮುದಾಯದಿಂದ ಬರಬೇಕು. ಜ್ಞಾನವ್ಯಾಪಿ ಎಂಬುದನ್ನು ಮಸೀದಿ ಎಂದು ಕರೆದರೆ ವಿವಾದ. ಮಸೀದಿಯೊಳಗೆ ತ್ರಿಶೂಲ ಹೇಗೆ? ನಾವು ಇಟ್ಟಿಲ್ಲ. ಮಸೀದಿಯೊಳಗೆ ಜ್ಯೋತಿರ್ಲಿಂಗ ಹೇಗೆ ಬಂತು? ಹೀಗಾಗಿ ಇತಿಹಾಸದ ತಪ್ಪು ಸರಿಮಾಡಬೇಕಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.