Gyanvapi Mosque Case, ಕಾಶಿ ಜ್ಞಾನವ್ಯಾಪಿ ವಿವಾದ ಅಯೋಧ್ಯೆಯ ದಾರಿ ಹಿಡಿಯುತ್ತಾ?
ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಅವಕಾಶ ಕೋರಿದ್ದ ಹಿಂದೂಗಳ ಅರ್ಜಿ ಸ್ವೀಕಾರಗೊಂಡಿದೆ. ಮಸೀದಿ ಆವರಣದಲ್ಲಿರುವ ಹಿಂದೂ ದೇವರ ಪೂಜೆ ನಮ್ಮ ಹಕ್ಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ವಾರಣಾಸಿ ಕೋರ್ಟ್, ಮುಸ್ಲಿಂ ಅರ್ಜಿದಾರರ ವಾದವನ್ನು ತಿರಸ್ಕರಿಸಿದೆ.
ವಾರಾಣಸಿಯ ಗ್ಯಾನವಾಪಿ ಮಸೀದಿ ವಿವಾದ ರಾಷ್ಟ್ರ ಮಟ್ಟದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.. ಮಸೀದಿ ಆವರಣದಲ್ಲಿ ಶೃಂಗಾರ ಗೌರಿ, ಗಣೇಶ, ಆಂಜನೇಯ ನಂದಿ ವಿಗ್ರಹಗಳಿವೆ.. ಈ ದೇವರಿಗೆ ಪ್ರತಿದಿನ ಪೂಜೆಗೆ ಅವಕಾಶ ಕೋರಿ ದೆಹಲಿ ಮೂಲದ ಐವರು ಮಹಿಳೆಯರು ಅರ್ಜಿ ಸಲ್ಲಿಸಿದ್ದರು.. ಆಗಸ್ಟ್ 17, 2021ರಂದು ವಾರಾಣಾಸಿ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ಪ್ರಶ್ನಿಸಿ ಅಂಜುಮನ್ ಸಮಿತಿ ಒಂದು ಅರ್ಜಿ ಸಲ್ಲಿಸಿತ್ತು.. ಆದ್ರೆ, ಅಂಜುಮನ್ ಸಮಿತಿ ಅರ್ಜಿ ವಜಾಗೊಳಿಸಿದ ವಾರಾಣಸಿ ಜಿಲ್ಲಾ ಕೋರ್ಟ್, ಹಿಂದೂ ಮಹಿಳೆಯರ ಅರ್ಜಿ ವಿಚಾರಣೆಗೆ ಅರ್ಹ ಅನ್ನೋ ತೀರ್ಪು ನೀಡಿದೆ. ಇದೀಗ ವಾರಾಣಸಿ ಮಸೀದಿ ವಿವಾದ ಆಯೋಧ್ಯೆ ದಾರಿಯಲ್ಲಿ ಸಾಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಗ್ಯಾನವಾಪಿ ಮತ್ತೆ ಹಿಂದೂಗಳ ತೆಕ್ಕೆಗೆ ಬರುತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ