Asianet Suvarna News Asianet Suvarna News

ಗುಜರಾತ್ ಚುನಾವಣೆ ಸಮೀಕ್ಷೆ, ಮತ್ತೆ ಬಿಜೆಪಿ ಅಧಿಕಾರಕ್ಕೆ, ಮೋದಿಗೆ ಫುಲ್ ಮಾರ್ಕ್ಸ್!

ಗುಜರಾತ್ ಚುನಾವಣೆ ಸಮೀಕ್ಷಾ ವರದಿ ಬಹಿರಂಗಗೊಂಡಿದೆ. ಇತ್ತ ನಿಷೇಧಿತ ಪಿಎಫ್ಐ ಸಂಘಟನೆ ಹೊಸ ಹೆಸರಿನಲ್ಲಿ ಮತ್ತೆ ಕಾರ್ಯಾಚರಣೆ ಆರಂಭಿಸಿದ ಮುನ್ಸೂಚನೆ ಸಿಕ್ಕಿದೆ. ಮೋದಿ ಸರ್ಕಾರದ ವಿರುದ್ಧ ಸುಳ್ಳು ಹೇಳಿ ಯುವಕರ ಪ್ರಚೋದನೆ ಸೇರಿದಂತೆ ಇಂದಿನ ಇಡೀ ದಿನ ಕಂಪ್ಲೀಟ್ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Oct 3, 2022, 11:40 PM IST

ಗುಜರಾತ್ ಚುನಾವಣೆಗೆ ಕೌಂಟ್‌ಡೌನ್ ಆರಂಭಗೊಂಡಿದೆ. ಇದೀಗ ಚುನಾವಣೆ ಕುರಿತು ಸಿವೋಟರ್ ಸಮೀಕ್ಷೆ ಬಹಿರಂಗವಾಗಿದೆ. ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಖಚಿತ ಎನ್ನುತ್ತಿದೆ. ಆದರೆ ಗುಜರಾತ್ ಸರ್ಕಾರದ ಆಡಳಿತಕ್ಕಿಂತ ಕೇಂದ್ರದ ಮೋದಿ ಸರ್ಕಾರದ ಆಡಳಿತವೇ ಲೇಸು ಎಂದು ಜನ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಆಮ್ ಆದ್ಮಿ ಪಾರ್ಟಿ ಗುಜರಾತ್ ಚುನಾವಣೆಯಲ್ಲಿ ಧುಮುಕಿ ಹೊಸ ಇತಿಹಾಸ ರಚಿಸಲು ಮುಂದಾಗಿದೆ. ಚುನಾವಣೆಯಲ್ಲಿ ಬಿಜೆಪಿ ಪಡೆಯುವ ಸ್ಥಾನಗಳೆಷ್ಟು? ಆಪ್ ಹೋರಾಟದಲ್ಲಿ ಕಾಂಗ್ರೆಸ್ ಹೇಳಹೆಸರಿಲ್ಲದಂತಾಯಿತಾ? ಈ ಕುರಿತ ರೋಚಕ ಮಾಹಿತಿ ಇಲ್ಲಿದೆ.