IAF Helicopter Crash: ಭೀಕರ ದುರಂತದಲ್ಲಿ ಬದುಕುಳಿದ ಏಕೈಕ ಸಿಬ್ಬಂದಿ ಕ್ಯಾ.ವರುಣ್ ಸಿಂಗ್!
ಸಶಸ್ತ್ರ ಪಡೆಗಳ ಮುಖ್ಯಸ್ಥ ರಾವತ್, ಅವರ ಪತ್ನಿ ಸೇರಿದಂತೆ 13 ಸೇನಾ ಸಿಬ್ಬಂದಿಯನ್ನು ಬಲಿಪಡೆದ ಹೆಲಿಕಾಪ್ಟರ್ ಪತನ ದುರ್ಘಟನೆಯಲ್ಲಿ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಬದುಕುಳಿದಿದ್ದಾರೆ.
ನವದೆಹಲಿ(ಡಿ.09): ಸಶಸ್ತ್ರ ಪಡೆಗಳ ಮುಖ್ಯಸ್ಥ ರಾವತ್, ಅವರ ಪತ್ನಿ ಸೇರಿದಂತೆ 13 ಸೇನಾ ಸಿಬ್ಬಂದಿಯನ್ನು ಬಲಿಪಡೆದ ಹೆಲಿಕಾಪ್ಟರ್ ಪತನ ದುರ್ಘಟನೆಯಲ್ಲಿ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಬದುಕುಳಿದಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಭಾರತೀಯ ವಾಯುಪಡೆ, ‘ಭದ್ರತಾ ಸೇವೆಗಳ ಸಿಬ್ಬಂದಿ ಕಾಲೇಜಿನಲ್ಲಿ ನಿರ್ದೇಶಕ ಸಿಬ್ಬಂದಿಯಾಗಿದ್ದ ಕ್ಯಾಪ್ಟನ್ ವರುಣ್ ಸಿಂಗ್ ಅವರು ಬುಧವಾರ ಸಂಭವಿಸಿದ ದುರಂತದಲ್ಲಿ ಬದುಕುಳಿದ ಏಕಮಾತ್ರ ಸಿಬ್ಬಂದಿ. ಆದರೆ ಅವರು ಗಂಭೀರ ಪ್ರಮಾಣದ ಸುಟ್ಟಗಾಯಗಳಿಂದ ಜರ್ಜರಿತರಾಗಿದ್ದು, ಸದ್ಯ ಅವರಿಗೆ ವೆಲ್ಲಿಂಗ್ಟನ್‌ನಲ್ಲಿರುವ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಹೇಳಿದೆ. 2020ರಲ್ಲಿ ಹಾರಾಟದ ವೇಳೆ ತಮ್ಮ ಲಘು ಯುದ್ಧ ವಿಮಾನ ತೇಜಸ್ ಯುದ್ಧ ವಿಮಾನವನ್ನು ತುರ್ತಾಗಿ ರಕ್ಷಿಸಿದ ಹಿನ್ನೆಲೆಯಲ್ಲಿ ಇದೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ವೇಳೆ ಕ್ಯಾ. ವರುಣ್ ಸಿಂಗ್ ಅವರು ಶೌರ್ಯಚಕ್ರ ಪುರಸ್ಕಾರಕ್ಕೆ ಭಾಜನರಾಗಿದ್ದರು.