ಇತ್ತ ರಾಗಾ ಹಮ್‌ ದೋ ಹಮಾರೆ ದೋ, ಅತ್ತ ಗೆಹ್ಲೋಟ್‌ ಅದಾನಿ ಭಾಯ್‌ ಭಾಯ್‌

ರಾಜಸ್ಥಾನದಲ್ಲಿ 'ಹೂಡಿಕೆದಾರರ ಸಮಾವೇಶ 2022' ಸಮಾವೇಶವನ್ನು ಆಯೋಜಿಸಲಾಗಿದ್ದು, ಸಮಾವೇಶದಲ್ಲಿ ಗೌತಮ್‌ ಅದಾನಿ ಪಾಲ್‌ಗೊಂಡಿದ್ದರು. ಈಗ ಅಶೋಕ್‌ ಗೆಹ್ಲೋಟ್‌ ಮತ್ತು ಗೌತಮ್‌ ಅದಾನಿ ಒಟ್ಟಿಗೆ ಕಾಣಿಸಿಕೊಂಡಿದ್ದು ದೇಶಾದ್ಯಂತ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. 
 

Share this Video
  • FB
  • Linkdin
  • Whatsapp

ಮುಖೇಶ್‌ ಅಂಬಾನಿ ಮತ್ತು ಗೌತಮ್‌ ಅದಾನಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ ಮಾಡುತ್ತ ಬಂದಿದ್ದು, ಮೋದಿ ಸರ್ಕಾರಕ್ಕೆ ಅದಾನಿ ಮತ್ತು ಅಂಬಾನಿ ಸಂಸ್ಥೆ ಎಲ್ಲಾ ಸವಲತ್ತುಗಳನ್ನು ಕೊಡುತ್ತಿದೆ ಎಂದು ಆರೋಪಿಸುತ್ತಿದ್ದರು. ಕಾಂಗ್ರೆಸ್‌ ಅಧಿಕಾರಿದಲ್ಲಿರುವ ರಾಜಸ್ಥಾನದಲ್ಲಿ ಗೌತಮ್‌ ಅದಾನಿ 65,000 ಕೋಟಿ ರೂ ಹೂಡಿಕೆ ಮಾಡುತ್ತಿದ್ದಾರೆ. ಇನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹೂಡಿಕೆದಾರರ ಸಮಾವೇಶ ಕಾರ್ಯಕ್ರಮದಲ್ಲಿ ಗೌತಮ್‌ ಅದಾನಿ ವೇದಿಕೆ ಹಂಚಿಕೊಂಡಿದ್ದು, ಅದಾನಿ ಸಂಪತ್ತು ದೇಶಕ್ಕೇ ಆಪತ್ತು ಎಂದಿದ್ದವರು ಈಗ ಆದಾನಿ ಜೊತೆ ಕೈ ಜೋಡಿಸಿದ್ದಾರೆ ಎಂದು ಕಾಂಗ್ರೆಸ್‌ ಮೇಲೆ ಬಿಜೆಪಿ ಆರೋಪಿಸಿದೆ.

ಕಾಂಗ್ರೆಸ್‌ ಸೇರಿದ್ದವರು ಮರಳಿ ಬಿಜೆಪಿಗೆ

Related Video