Election Result ಮೋದಿ ಯೋಗಿ ಅಭಿವೃದ್ಧಿ ಮಂತ್ರ, ಪಂಚ ರಾಜ್ಯ ಗೆಲುವು ಭಾರತದ ಭವಿಷ್ಯದ ದಿಕ್ಸೂಚಿ ಎಂದ ಸಿಎಂ ಬೊಮ್ಮಾಯಿ!

  • ಮೋದಿ ಹಾಕಿರುವ ಕ್ರಮ, ಸುರಕ್ಷತೆ ಬಗ್ಗೆ ಭಾರತೀಯರಿಗೆ ಹೆಮ್ಮೆ ಇದೆ
  • ಮೋದಿಯವರನ್ನು ಯಾವತ್ತು ಜನ ಕೈಬಿಡೋಕೆ ಸಾಧ್ಯವಿಲ್ಲ
  • ಪಂಚ ರಾಜ್ಯ ಫಲಿತಾಂಶದ ಬೆನ್ನಲ್ಲಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ
     

Share this Video
  • FB
  • Linkdin
  • Whatsapp

ಬೆಂಗಳೂರು(ಮಾ.10): ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಕಂಡಿದೆ. ಇದು ಮುಂಬರುವ ದಿನಗಳಲ್ಲಿ ಭಾರತದ ದಿಕ್ಸೂಚಿಯಾಗಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮಾತಿಗೆ ತೂಕವಿದೆ. ರಷ್ಯಾ ಉಕ್ರೇನ್ ಯುದ್ಧ ಬಿಡಿ ಎನ್ನುವ ಶಕ್ತಿ ಅಮೇರಿಕಾಗೂ ಇಲ್ಲ, ಆ ಶಕ್ತಿ ಭಾರತಕ್ಕೆ ಮಾತ್ರ ಇದೆ ಎಂದರು. ಅಖಿಲೇಶ್ ಯಾದವ್ ಸೈಕಲ್ ಸವಾರಿ ಮಾಡಿ ಗೆಲ್ಲುತ್ತಾರೆ ಎಂದು ವಿಶ್ಲೇಷಣೆ ಮಾಡಿದ್ದರು. ಜಾತಿ ಆಧಾರದ ಮೇಲೆ ಅಖಿಲೇಶ್ ಗೆದ್ದೇ ಬಿಟ್ಟರು ಎಂದಿದ್ದರು. ನಮ್ ಕಡೆ ಇದನ್ನು ಶೇಖ್ ಮೊಹಮ್ಮದ್ ಲೆಕ್ಕ ಅಂತಾ ಹೇಳ್ತಾರೆ. ವಿಪಕ್ಷಗಳ ಯಾವ ಲೆಕ್ಕಗಳು ನಡೆಯಲಿಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ.

Related Video