
ನಾಳೆ ಪ್ರಧಾನಿ ಮೋದಿ 3.0 ಸರ್ಕಾರದ ಮೊದಲ ಬಜೆಟ್..!
ನಾಳೆ ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಲಿದೆ. ನಿರ್ಮಲಾ ಸೀತಾರಾಮನ್ 7ನೇ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆಇದೆ. ಲೋಕಸಭೆಯಲ್ಲಿ ಮೊದಲ ದಿನವೇ ನೀಟ್ ಸಂಗ್ರಾಮ ಕೂಡ ಶುರುವಾಗಿದೆ.
ಬೆಂಗಳೂರು (ಜು.22): ನಾಳೆ ಪ್ರಧಾನಿ ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಲಿದೆ. ದಾಖಲೆಯ ಏಳನೇ ಬಜೆಟ್ ಮಂಡನೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಸಜ್ಜಾಗಿದ್ದಾರೆ. ಪ್ರಧಾನಿ ಮೋದಿ 3.0 ಬಜೆಟ್ನಲ್ಲಿ ಯಾರಿಗೆಲ್ಲಾ ಬಂಪರ್ ಸಿಗಲಿದೆ ಎನ್ನುವ ಕುತೂಹಲವಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇಂದು 522 ಪುಟಗಳ ಆರ್ಥಿಕ ಸಮೀಕ್ಷೆಯನ್ನು ವಿತ್ತ ಸಚಿವೆ ಮಂಡನೆ ಮಾಡಿದ್ದು, ಮಂಗಳವಾರ ಬೆಳಗ್ಗೆ 11ಕ್ಕೆ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಇನ್ನು ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಕೂಡ ಇಡಲಾಗಿದೆ.
ನಾಳೆಯ ಬಜೆಟ್ ಹೇಗಿರಲಿದೆ ಎಂಬುದರ ಮಹತ್ವದ ಸುಳಿವು ನೀಡಿದ ಪ್ರಧಾನಿ ಮೋದಿ
ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಸಹಾಯಧನವನ್ನು 6 ಸಾವಿರದಿಂದ 8 ಸಾವಿರಕ್ಕೆ ಹೆಚ್ಚಿಸಲು ರೈತರ ಒತ್ತಾಯವಿದೆ. ಅದರೊಂದಿಗೆ ಸೆಕ್ಷನ್ 80C ಅಡಿ ತೆರಿಗೆ ವಿನಾಯಿತಿ ಮಿತಿ ಹೆಚ್ಚಳಕ್ಕೆ ಬೇಡಿಕೆ ಇಡಲಾಗಿದೆ. ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಹೆಚ್ಚಿಸಲು ಸಬ್ಸಿಡಿ ನಿರೀಕ್ಷೆ ಮಾಡಲಾಗಿದೆ. 8ನೇ ವೇತನ ಆಯೋಗ ಜಾರಿಗೆ ನೌಕರರ ಡಿಮ್ಯಾಂಡ್ ಮಾಡಿದ್ದಾರೆ.