News Hour: ಲೋಕಸಭೆ ಚುನಾವಣೆ ಹೊತ್ತಲ್ಲೇ ಮತ್ತೊಮ್ಮೆ ರೈತದಂಗೆ!
farmers protest 2024 ಲೋಕಸಭೆ ಚುನಾವಣೆ ಹೊತ್ತಲ್ಲಿಯೇ ರೈತ ಹೋರಾಟದ ಕಿಚ್ಚು ಆರಂಭವಾಗಿದೆ. ಕೇಂದ್ರ ಸರ್ಕಾರ ತಮ್ಮ 10 ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ದೆಹಲಿ ಚಲೋ ನಡೆಸುತ್ತಿದೆ.
ಬೆಂಗಳೂರು (ಫೆ.14): ಲೋಕಸಭಾ ಚುನಾವಣೆ ರಂಗೇರುವ ಹೊತ್ತಿನಲ್ಲಿ ಪಂಜಾಬ್ ಹಾಗೂ ಹರಿಯಾಣ ಭಾಗದ ರೈತರು ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಎಂಎಸ್‌ಪಿ ಗ್ಯಾರಂಟಿ ಕಾನೂನಿಗೆ ಆಗ್ರಹಿಸಿ ದೆಹಲಿ ಚಲೋ ನಡೆಸುತ್ತಿದ್ದು, ದೆಹಲಿ ಮುಂದಿನ ದಿನಗಳಲ್ಲಿ ಅಕ್ಷರಶಃ ರಣರಂಘವಾಗುವ ಸೂಚನೆ ಸಿಕ್ಕಿದೆ.
ತಮ್ಮ 10 ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರಕ್ಕೆ ಬೇಡಿಕೆ ಇಟ್ಟು ದೆಹಲಿ ಚಲೋ ಆರಂಭಿಸಿದ್ದಾರೆ. ಇದರ ನಡುವೆ ರೈತರ ಮೇಲೆ ಅಶ್ರವಾಯು ಪ್ರಯೋಗ ಮಾಡಲಾಗಿದ್ದು, ದೆಹಲಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
'ಇದು ದೇಶದ ಸಂಪೂರ್ಣ ಬಜೆಟ್‌ಗೆ ಸಮ..' ರೈತರ ಬೇಡಿಕೆಯಾದ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಏಕೆ ಸಾಧ್ಯವಿಲ್ಲ?
ಗ್ಯಾರಂಟಿ ಕಾನೂನಿಗೆ ಡಿಮ್ಯಾಂಡ್ ಇಟ್ಟಿದ್ದಾರೆ. ರೈತರು,ಕೇಂದ್ರ ಸಚಿವರ 2ನೇ ಸಭೆಯಲ್ಲೂ ಮನವೊಲಿಕೆ ವಿಫಲವಾಗಿದೆ. ಹೆದ್ದಾರಿಯಲ್ಲಿ ಮುಳ್ಳುತಂತಿ ತಡೆಗೋಡೆ ನಿರ್ಮಿಸಿ ಕಟ್ಟೆಚ್ಚರ ವಹಿಸಲಾಗಿದೆ. ಈ ನಡುವೆ ಎಂಎಸ್‌ಪಿ ಗ್ಯಾರಂಟಿ ನೀಡಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.