Asianet Suvarna News Asianet Suvarna News

ಸೋಂಕಿತೆಯ ಆಕ್ಸಿಜನ್ ಪೈಪ್ ತೆಗೆದು ಪೂಜೆ, ಮೂಢನಂಬಿಕೆಗೆ ಹೋಯ್ತು ಪ್ರಾಣ.!

- ಸೋಂಕಿತೆಯ ಆಕ್ಸಿಜನ್ ತೆಗೆದು ಪೂಜೆ

- ಮೂಢನಂಬಿಕೆಗೆ ಸೋಂಕಿತೆಯ ಪ್ರಾಣವೇ ಹೋಯ್ತು

- ಉತ್ತರ ಪ್ರದೇಶದ ಕಾನ್ಪುರ ಆಸ್ಪತ್ರೆಯಲ್ಲಿ ಘಟನೆ 

May 14, 2021, 10:16 AM IST

ಬೆಂಗಳೂರು (ಮೇ. 14): ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಬೆಡ್ ಸಿಗಲಿ ಅಂತ ಜನ ಕಂಡ ಕಂಡ ದೇವರಿಗೆ ಬೇಡಿಕೊಳ್ಳುತ್ತಿದ್ದಾರೆ. ಆದರೆ ಇಲ್ಲೊಂದು ಉಲ್ಟಾ ಘಟನೆ ನಡೆದಿದೆ. ಸೋಂಕಿತೆಗೆ ಹಾಕಿದ್ದ ಆಕ್ಸಿಜನ್ ಪೈಪ್ ಕಿತ್ತು ಹಾಕಿ, ಬೆಡ್ ಮೇಲೆ ಪೂಜೆ ಮಾಡಿದ್ದು, ಸೋಂಕಿತೆ ಮೃತಪಟ್ಟಿದ್ದಾರೆ. ಕೂಡಲೇ ಘಟನೆ ಗಂಭೀರತೆ ತಿಳಿದು, ವೈದ್ಯರ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಗಲಾಟೆ ಮಾಡಿದ್ದಾರೆ. ಆದರೆ ಪಕ್ಕದ ಬೆಡ್‌ನಲ್ಲಿದ್ದ ವ್ಯಕ್ತಿ ಇದನ್ನೆಲ್ಲಾ ವಿಡಿಯೋ ಮಾಡಿದ್ದು ವೈರಲ್ ಆಗಿದೆ.