Exclusive Interview: UCC ಜಾರಿಗೆ ಆಗ್ರಹ, ಹಿಜಾಬ್ ವಿವಾದ ಬಿಟ್ಟು ಓದಿಗೆ ಗಮನ ಕೊಡಿ: ಕೇರಳ ರಾಜ್ಯಪಾಲ

ಏಕರೂಪ ನಾಗರಿಕ ಸಂಹಿತೆ, ಹಿಜಾಬ್ ವಿವಾದ ಹಾಗೂ ಉತ್ತರ ಪ್ರದೇಶ ಚುನಾವಣೆ ವಿಷಯಗಳ ಕುರಿತು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರೊಂದಿಗೆ ಏಷ್ಯಾನೆಟ್ ನ್ಯೂಸ್ ವಿಶೇಷ ಸಂವಾದ ನಡೆಸಿದೆ. ಈ ವಿಚಾರವಾಗಿ ರಾಜ್ಯಪಾಲರು ಮುಕ್ತವಾಗಿ ಮಾತನಾಡಿದ್ದಾರೆ. ಆರಿಫ್ ಮೊಹಮ್ಮದ್ ಖಾನ್ ಈ ಎಲ್ಲಾ ವಿಚಾರಗಳ ಬಗ್ಗೆ ಏನು ಹೇಳಿದ್ದಾರೆ? ಇಲ್ಲಿದೆ ಅವರ ಸಂದರ್ಶನದ ಸಂಪೂರ್ಣ ವಿಡಿಯೋ

First Published Feb 15, 2022, 10:14 AM IST | Last Updated Feb 15, 2022, 10:14 AM IST

ತಿರುವನಂತಪುರಂ(ಫೆ.15): ಕರ್ನಾಟಕದ ಉಡುಪಿಯಿಂದ ಶುರುವಾದ ಹಿಜಾಬ್ ವಿವಾದ ಹೆಚ್ಚಾಗುತ್ತಿದೆ. ಈ ನಡುವೆ ನಡೆಯುತ್ತಿರುವ ಪಂಚರಾಜ್ಯ ಚುನಾವಣೆಯ ಮೇಲೆ ಇದು ಪರಿಣಾಮ ಬೀರುತ್ತಿದ್ದು,  ಕರ್ನಾಟಕದಿಂದ ಯುಪಿ ಮತ್ತು ಇತರ ರಾಜ್ಯಗಳಲ್ಲಿಯೂ ಹಿಜಾಬ್‌ನ ವಿಷಯವು ವೇಗವನ್ನು ಪಡೆಯುತ್ತಿದೆ. ಅಲ್ಲದೇ ರಾಜಕೀಯ ನಯಕರೂ ಚುನಾವಣಾ ಪ್ರಚಾರದ ವೇಳೆ ಈ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಾರೆ.

ಹೀಗಿರುವಾಗಲೇ ಅತ್ತ ಏಕರೂಪ ನಾಗರಿಕ ಸಂಹಿತೆಯ ಬೇಡಿಕೆಯೂ ಹೆಚ್ಚುತ್ತಿದೆ. ಚುನಾವಣೆಯ ಸಮಯದಲ್ಲಿ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಚಾರ ಭಾಷಣದಲ್ಲಿ ಈ ಬಗ್ಗೆ ನೀಡಿರುವ ಹೇಳಿಕೆಯಿಂದ ವಿವಾದ ಹೆಚ್ಚಾಗಿದೆ, ನೀವು ಎಚ್ಚರಿಕೆಯಿಂದ ಮತ ಹಾಕದಿದ್ದರೆ ಯುಪಿ ಕಾಶ್ಮೀರ, ಕೇರಳ ಮತ್ತು ಬಂಗಾಳ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಅವರು ಹೇಳಿರುವುದು ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ.

ಸದ್ಯ ಈ ಎಲ್ಲ ವಿಷಯಗಳ ಕುರಿತು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರೊಂದಿಗೆ ಏಷ್ಯಾನೆಟ್ ನ್ಯೂಸ್ ವಿಶೇಷ ಸಂವಾದ ನಡೆಸಿದೆ. ಈ ವಿಚಾರವಾಗಿ ರಾಜ್ಯಪಾಲರು ಮುಕ್ತವಾಗಿ ಮಾತನಾಡಿದ್ದಾರೆ. ಆರಿಫ್ ಮೊಹಮ್ಮದ್ ಖಾನ್ ಈ ಎಲ್ಲಾ ವಿಚಾರಗಳ ಬಗ್ಗೆ ಏನು ಹೇಳಿದ್ದಾರೆ? ಇಲ್ಲಿದೆ ಅವರ ಸಂದರ್ಶನದ ಸಂಪೂರ್ಣ ವಿಡಿಯೋ