ಊರಲ್ಲೇ ಕುಳಿತು ರಣತಂತ್ರ ಮಾಡಿದ ಏಕನಾಥ್ ಶಿಂಧೆಗೆ ಸಿಎಂ ಸ್ಥಾನ ಕೈತಪ್ಪಿದ್ದು ಹೇಗೆ?

ಹೊಸ ಸರ್ಕಾರದಲ್ಲಿ ಮತ್ತೆ ಸಿಎಂ ಆಗಲು ಬಯಸಿದ್ದ ಏಕನಾಥ್ ಶಿಂಧೆ ಊರಲ್ಲಿ ಕುಳಿತು ಭರ್ಜರಿ ರಾಜಕೀಯ ರಣತಂತ್ರ ಹೂಡಿದ್ದರು. ಆದರೆ ಮುಂಬೈನಲ್ಲಿ ನಿರ್ಧಾರ ಬೇರೆಯೇ ಆಗಿತ್ತು. ಇದಕ್ಕೆ ಕಾರಣವೇನು?  

Share this Video
  • FB
  • Linkdin
  • Whatsapp

ಮುಂಬೈ(ಡಿ.06) ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಭಾರಿ ಹಗ್ಗಜಗ್ಗಾಟ ನಡೆದಿತ್ತು. ಹೀಗಾಗಿ ಹೊಸ ಸರ್ಕಾರ ರಚನೆ ವಿಳಂಬವಾಗಿತ್ತು. ಸಿಎಂ ಸ್ಥಾನದಲ್ಲಿ ಮುಂದುವರಿಯುವ ಬಯಕೆ ವ್ಯಕ್ತಪಡಿಸಿದ್ದ ಏಕನಾಥ್ ಶಿಂಧೆ ಊರಲ್ಲೇ ಕುಳಿತು ರಣತಂತ್ರ ಹೂಡಿದ್ದರು.ನನ್ನ ನಾಯಕತ್ವದಲ್ಲೇ ಚುನಾವಣೆ ಗೆದ್ದಿದ್ದೇವೆ ಎಂದು ಹುಟ್ಟೂರಲ್ಲಿ ಹೇಳಿಕೆ ನೀಡಿದ್ದರು. ನಾನೇ ಸಿಎಂ ಆಗಬೇಕು ಎಂದು ಜನ ಬಯಸಿದ್ದರು ಎಂದು ಶಿಂಧೆ ಹೇಳಿದ್ದರು. ಆದರೆ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದಾರೆ. ಗೆಲುವಿನ ಬೆನ್ನಲ್ಲೇ ಗೇಮ್ ಪ್ಲಾನ್ ಮಾಡಿದ್ದ ಶಿಂಧೆಗೆ ಸಿಎಂ ಸ್ಥಾನ ತಪ್ಪಿದ್ದು ಹೇಗೆ?

Related Video