Asianet Suvarna News Asianet Suvarna News

ಬೈಡನ್, ಜಿನ್‌ಪಿಂಗ್ ಬ್ರೈನ್ ಗೇಮ್ ಹೇಗಿದೆ ಗೊತ್ತಾ..? ಅಮೆರಿಕಾ ವರದಿ.. ಎಚ್ಚರಿಕೆಯೋ..? ಭವಿಷ್ಯ ನುಡಿದಿದೆಯೋ?

ಭಾರತದ ಮೇಲೆ ಯುದ್ಧ ಸಾರುತ್ತಂತೆ ಭಿಕಾರಿ ದೇಶ ಪಾಕಿಸ್ತಾನ. ಇದು ಖುದ್ದು ಅಮೆರಿಕಾನೇ ಕೊಟ್ಟಿರೋ ವಾರ್ನಿಂಗ್. ಭಾರತದ ಮೇಲೆ ಉಗ್ರ ಪ್ರಯೋಗ ಮಾಡೋಕೇ ಕಾಯ್ತಾ ಇದೆಯಂತೆ ಪಾಪಿ ದೇಶ. ಅದಕ್ಕೆ ಡ್ರಾಗನ್ ದೇಶದ ಬೆಂಬಲ ಕೂಡ ಸಿಕ್ತಾ ಇದೆಯಂತೆ. 

First Published Mar 11, 2023, 2:49 PM IST | Last Updated Mar 11, 2023, 2:49 PM IST

ಭಾರತದ ಮೇಲೆ ಯುದ್ಧ ಸಾರುತ್ತಂತೆ ಭಿಕಾರಿ ದೇಶ ಪಾಕಿಸ್ತಾನ. ಇದು ಖುದ್ದು ಅಮೆರಿಕಾನೇ ಕೊಟ್ಟಿರೋ ವಾರ್ನಿಂಗ್. ಭಾರತದ ಮೇಲೆ ಉಗ್ರ ಪ್ರಯೋಗ ಮಾಡೋಕೇ ಕಾಯ್ತಾ ಇದೆಯಂತೆ ಪಾಪಿ ದೇಶ. ಅದಕ್ಕೆ ಡ್ರಾಗನ್ ದೇಶದ ಬೆಂಬಲ ಕೂಡ ಸಿಕ್ತಾ ಇದೆಯಂತೆ. ಒಂದ್ ಕಡೆ ಬೈಡನ್. ಜಿನ್ಪಿಂಗ್ ಇಬ್ಬರೂ ಕೂತು ಬ್ರೈನ್ ಗೇಮ್ ಆಡ್ತಾ ಇದ್ರೆ, ಪಾಪಿ ಪಾಕ್ ಬ್ಲೈಂಡಾಗಿ ಆ ಆಟದ ಕಾಯಿಯಾಗಿದೆ ಅನ್ನುಸ್ತಾ ಇದೆ. ಅಷ್ಟೇ ಅಲ್ಲ, ಯಾರು ಎಂಥಾ ಚಾಣಾಕ್ಷತೆ ಮೆರೆದರೂ, ಅವರೆಲ್ಲರಿಗೂ ಚೆಕ್ ಮೇಟ್ ಕೊಡೋಕೆ ಮೋದಿ ಅವರು ಚತುರ ಚದುರಂಗ ಶುರುಮಾಡಿದ್ದಾರೆ ಅನ್ನೋ ಮಾಹಿತಿಯೂ ಇದೆ.

ಈ ಅತಿ ಕೌತುಕ ಕಥಾನಕ ನಿಮ್ಮ ಮುಂದಿಡೋದೇ ಇವತ್ತಿನ ಸುವರ್ಣ ಫೋಕಸ್, ಇಂಡೋ ಪಾಕ್ ವಾರ್. ಇದು ಅಮೆರಿಕ ಕೊಟ್ಟ ವಾರ್ನಿಂಗ್. ಆ ರಿಪೋರ್ಟಿನಲ್ಲಿರೋದು ಬರೀ ಅಷ್ಟೇ ಅಲ್ಲ. ಅದನ್ನೂ ಮೀರಿದ ರಹಸ್ಯಗಳಿದಾವೆ. ಆದ್ರೆ ಅದು ಹೇಳದ ನಿಗೂಢ ಸಂಗತಿಗಳೂ ಸಾಕಷ್ಟಿವೆ. ಪಾಕಿಸ್ತಾನದ ಹೊಟ್ಟೆಗೂ ಹಿಟ್ಟಿಲ್ಲ. ಅಂಥದ್ರಲ್ಲಿ, ಆ ದೇಶ ಭಾರತದ ವಿರುದ್ಧ ಮಸಲತ್ತು ಮಾಡೋಕೆ ಸಾಧ್ಯಾನಾ? ಯುದ್ಧ ಸಾರೋಕೆ ಸಾಧ್ಯಾನಾ? ಈ ಅನುಮಾನ ನಿಮ್ಮನ್ನ ಕಾಡ್ತಾ ಇದ್ರೆ, ಅಮೆರಿಕಾದ ವರದಿಯಲ್ಲೇ ಉತ್ತರ ಸಿಗುತ್ತೆ. ಇಲ್ಲ. ಅದೂ ಸಾಧ್ಯವಿಲ್ಲ. ಈ ವರದಿನಾ ಭಾರತ ನೆಗ್ಲೆಕ್ಟ್ ಮಾಡೋಕೆ ಸಾಧ್ಯವಿಲ್ಲ. ಹಾಗಾದ್ರೆ ಏನು ಮಾಡ್ಬೇಕು? ಭಾರತ ಪಾಕಿಸ್ತಾನಕ್ಕೂ ಯುದ್ಧವಾಗುತ್ತೆ ಅಂತ ಅಮೆರಿಕಾ ಹೇಳಿದೆ. ಆದ್ರೆ, ಆ ಯುದ್ಧದ ಪರಿಣಾಮಕ್ಕಿಂತಾ, ಈ ಹೇಳಿಕೆಯ ಪ್ರಭಾವವೇ ಹೆಚ್ಚಾದ ಹಾಗೆ ಭಾಸವಾಗ್ತಿದೆ.