ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡ ‘ತೇಜ್’: ಚಂಡಮಾರುತ ದಿಕ್ಕು ಬದಲಿಸಿದ್ರೆ ಭಾರತಕ್ಕಿದೆ ದೊಡ್ಡ ಆಪತ್ತು!

ಒಂದು ವೇಳೆ ಈ ತೇಜ್ ಚಂಡಮಾರುತ ತನ್ನ ದಿಕ್ಕು ಬದಲಿಸಿದ್ದೇ ಆದ್ರೆ, ಭಾರತಕ್ಕೆ ದೊಡ್ಡ ಮಟ್ಟದ ಅಪಾಯ ಕಾದಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಈ ಬಗ್ಗೆ ಇಲ್ಲಿದೆ ವಿವರ..

First Published Oct 23, 2023, 2:06 PM IST | Last Updated Oct 23, 2023, 2:06 PM IST

ಅರಬ್ಬಿ ಸಮುದ್ರದ ಮಧ್ಯ ಭಾಗದಲ್ಲಿ ವಾಯು ಭಾರ ಕುಸಿತ ಉಂಟಾಗಿದೆ. ಇದರ ಪರಿಣಾಮ ಭಯಾನಕ  ಚಂಡಮಾರುತ ಸೃಷ್ಟಿಯಾಗಿದೆ. ಈ ಚಂಡಮಾರುತಕ್ಕೆ ತೇಜ್ ಅನ್ನೋ ಹೆಸರಿಡಲಾಗಿದೆ. ಹಾಗೆನೇ ಈ ಚಂಡಮಾರುತ ಯೆಮನ್ ಹಾಗೂ ಒಮನ್ ದೇಶಗಳ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಈ ತೇಜ್ ಚಂಡಮಾರುತ ತನ್ನ ದಿಕ್ಕು ಬದಲಿಸಿದ್ದೇ ಆದ್ರೆ, ಭಾರತಕ್ಕೆ ದೊಡ್ಡ ಮಟ್ಟದ ಅಪಾಯ ಕಾದಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಆ ಕುರಿತ ವರದಿಯೊಂದನ್ನು ಇಲ್ಲಿ ನೋಡೋಣ. 

Video Top Stories