ದೆಹಲಿ ಚುನಾವಣೆ ಬಗ್ಗೆ ಮತ್ತೊಂದು ಭವಿಷ್ಯ, ರಾಜಧಾನಿ ಅಧಿಕಾರ ರಹಸ್ಯ ಬಯಲು

ದೆಹಲಿ ಚುನಾವಣೆ ಫಲಿತಾಂಶ ಕುರಿತು ಇಂದು ಕೆಲ ಸಮೀಕ್ಷೆಗಳು ಪ್ರಕಟಗೊಂಡಿದೆ. ಈ ಸಮೀಕ್ಷೆಗಳಲ್ಲಿ ಯಾರಿಗೆ ಅಧಿಕಾರ? ಇನ್ನು ರಾಜ್ಯಸಭೆಯಲ್ಲಿ ಮೋದಿ ತಿರುಗೇಟು, ರಾಜ್ಯ ಬಿಜೆಪಿ ಬಣ ಬಡಿದಾಟ ಇಂಟ್ರೆಸ್ಟಿಂಗ್ ಅಪ್‌ಡೇಟ್ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ. 
 

Share this Video
  • FB
  • Linkdin
  • Whatsapp

ನವದೆಹಲಿ(ಜ.06) ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಫೆಬ್ರವರಿ 8 ರಂದು ಘೋಷಣೆಯಾಗಲಿದೆ. ಆದರೆ ಈಗಾಗಲೇ ಮತಗಟ್ಟೆ ಸಮೀಕ್ಷೆಗಳು ಬಹಿರಂಗವಾಗಿದೆ. ಮತದಾನದ ಬೆನ್ನಲ್ಲೇ ಮತಗಟ್ಟೆ ಸಮೀಕ್ಷೆಗಳು ಪ್ರಕಟಗೊಂಡಿತ್ತು. ಈ ಪೈಕಿ ಬಿಜೆಪಿಗೆ ಅಧಿಕಾರ ಎಂದವರೇ ಹೆಚ್ಚು. ಆದರೆ ಇಂದು ಆಕ್ಸಿಸ್ ಮೈ ಇಂಡಿಯಾ ಮತಗಟ್ಟೆ ಸಮೀಕ್ಷೆ ಬಹಿರಂಗವಾಗಿದೆ. ಇದರಲ್ಲೂ ದೆಹಲಿಯಲ್ಲಿ ಬಿಜೆಪಿಗೆ ಅಧಿಕಾರ ಎಂದಿದೆ. 70 ಕ್ಷೇತ್ರಗಳ ಪೈಕಿ ಬಿಜೆಪಿಗೆ 45-55, ಆಪ್​ಗೆ 15-25 ಸ್ಥಾನ, ಕಾಂಗ್ರೆಸ್​ಗೆ 0-1 ಸ್ಥಾನಗಳು ಎಂದ ಆಕ್ಸಿಸ್ ಮೈ ಇಂಡಿಯಾ ಹೇಳಿದೆ.

Related Video