ಗಲ್ಲು ಮೂವರಿಗೋ, ಎಲ್ಲರಿಗೋ?: ಗಂಟೆಯಲ್ಲಿನ ನಿರ್ಧಾರ!
ಗಲ್ಲುಶಿಕ್ಷೆ ಮುಂದೂಡುವಂತೆ ಕೋರಿ ನಿರ್ಭಯಾ ಹತ್ಯಾಚಾರಿಗಳು ಸಲ್ಲಿಸಿದ್ದ ಕ್ಯೂರೆಟಿವ್ ಅರ್ಜಿಯ ವಿಚಾರಣೆ ದೆಹಲಿ ಕೋರ್ಟ್‌ನಲ್ಲಿ ಮುಂದುವರೆದಿದೆ. ಎರಡೂ ಕಡೆಯ ವಾದ ಆಲಿಸಿರುವ ನ್ಯಾಯಾಧೀಶರು, ಊಟದ ವಿರಾಮದ ಬಳಿಕ ತೀರ್ಪು ಪ್ರಕಟಿಸುವುದಾಗಿ ಹೇಳಿದ್ದಾರೆ.
ನವದೆಹಲಿ(ಜ.31): ಗಲ್ಲುಶಿಕ್ಷೆ ಮುಂದೂಡುವಂತೆ ಕೋರಿ ನಿರ್ಭಯಾ ಹತ್ಯಾಚಾರಿಗಳು ಸಲ್ಲಿಸಿದ್ದ ಕ್ಯೂರೆಟಿವ್ ಅರ್ಜಿಯ ವಿಚಾರಣೆ ದೆಹಲಿ ಕೋರ್ಟ್‌ನಲ್ಲಿ ಮುಂದುವರೆದಿದೆ. ಎರಡೂ ಕಡೆಯ ವಾದ ಆಲಿಸಿರುವ ನ್ಯಾಯಾಧೀಶರು, ಊಟದ ವಿರಾಮದ ಬಳಿಕ ತೀರ್ಪು ಪ್ರಕಟಿಸುವುದಾಗಿ ಹೇಳಿದ್ದಾರೆ. ನಿರ್ಭಯಾ ಪರ ವಕೀಲರು ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ ವಿನಯ್ ಗುಪ್ತಾನನ್ನು ಹೊರತುಪಡಿಸಿ ಉಳಿದ ಮೂವರು ಅಪರಾಧಿಗಳನ್ನು ಗಲ್ಲಿಗೇರಿಸುವಂತೆ ಕೋರಿದ್ದು, ನ್ಯಾಯಾಧೀಶರೂ ಇದಕ್ಕೆ ಸಮ್ಮತಿ ಸೂಚಿಸುವುದು ಬಹುತೇಕ ನಿಚ್ಚಳ ಎನ್ನಲಾಗಿದೆ. ರಾಷ್ಟ್ರಪತಿ ಕ್ಷಮಾದಾನ ಅರ್ಜಿಯ ಕುರಿತು ನಿರ್ಣಯ ಕೈಗೊಂಡ ಬಳಿಕ ಪವನ್ ಗುಪ್ತಾ ಹಣೆಬರಹ ನಿರ್ಧರಿಸಲಾಗುವುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..