ವೀರೇಂದ್ರ ಹೆಗ್ಗಡೆ ಸಮಾಜ ಸೇವೆಗೆ ಪ್ರಧಾನಿ ಮೋದಿ ಗಿಫ್ಟ್, ರಾಜ್ಯಸಭೆಗೆ ನಾಮನಿರ್ದೇಶನ!
- ನಾಮನಿರ್ದೇಶದ ಬಳಿಕ ಸಂತಸ ಹಂಚಿಕೊಂಡ ವಿರೇಂದ್ರ ಹೆಗ್ಗಡೆ
- ಕೋಲಾರದಿಂದ ಸ್ಪರ್ಧೆಗೆ ಮನಸ್ಸು ಮಾಡಿದ್ರಾ ಸಿದ್ದರಾಮಯ್ಯ?
- ಇಡೀ ದಿನದ ಕಂಪ್ಲೀಟ್ ಸುದ್ದಿ ನ್ಯೂಸ್ ಹವರ್ ವಿಡಿಯೋ
ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವಿರೇಂದ್ರ ಹೆಗ್ಗಡೆಯವರ ಸಮಾಜ ಸೇವೆಯನ್ನು ಗುರುತಿಸಿದ ಕೇಂದ್ರ ಸರ್ಕಾರ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಹೆಗ್ಗಡೆ ಜೊತೆಗೆ ಮಾಜಿ ಅಥ್ಲೀಟ್ ಪಿಟಿ ಉಷ, ಸಂಗೀತ ನಿರ್ದೇಶಕ ಇಳಯರಾಜ, ತೆಲುಗು ಸಿನಿಮಾ ನಿರ್ದೇಶಕ ವಿಜಯೇಂದ್ರ ಪ್ರಸಾದ್ ಅವರನ್ನು ನಾಮನಿರ್ದಶನ ಮಾಡಲಾಗಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಇಡೀ ದಿನದ ಸಂಪೂರ್ಣ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.