Asianet Suvarna News Asianet Suvarna News

ಸಸ್ಯಾಹಾರಿಗಳು, ಧೂಮಪಾನಿಗಳಲ್ಲಿ ಕೊರೋನಾ ವೈರಸ್ ಕಡಿಮೆಯಂತೆ..!

ಧೂಮಪಾನಿಗಳಿಗೆ ಕೊರೋನಾ ವೈರಸ್‌ ಅಂಟುವ ಸಾಧ್ಯತೆ ಅಧಿಕ ಎಂದು ಈ ಮುನ್ನ ಹೇಳಲಾಗುತ್ತಿತ್ತು. ಆದರೆ ಈಗ ನಡೆಸಲಾದ ಸೀರೋ ಸಮೀಕ್ಷೆಯಲ್ಲಿ ಧೂಮಪಾನಿಗಳು ಹಾಗೂ ಸಸ್ಯಾಹಾರಿಗಳ ಮೇಲೆ ಕೊರೋನಾ ವೈರಸ್‌ ಕಡಿಮೆ ಪ್ರಭಾವ ಬೀರಿದೆ ಎಂಬ ಅಂಶ ಕಂಡುಬಂದಿದೆ. 

ಬೆಂಗಳೂರು (ಏ. 27): ಧೂಮಪಾನಿಗಳಿಗೆ ಕೊರೋನಾ ವೈರಸ್‌ ಅಂಟುವ ಸಾಧ್ಯತೆ ಅಧಿಕ ಎಂದು ಈ ಮುನ್ನ ಹೇಳಲಾಗುತ್ತಿತ್ತು. ಆದರೆ ಈಗ ನಡೆಸಲಾದ ಸೀರೋ ಸಮೀಕ್ಷೆಯಲ್ಲಿ ಧೂಮಪಾನಿಗಳು ಹಾಗೂ ಸಸ್ಯಾಹಾರಿಗಳ ಮೇಲೆ ಕೊರೋನಾ ವೈರಸ್‌ ಕಡಿಮೆ ಪ್ರಭಾವ ಬೀರಿದೆ ಎಂಬ ಅಂಶ ಕಂಡುಬಂದಿದೆ. 

ಜನತಾ ಕರ್ಫ್ಯೂ ಮಧ್ಯೆಯೂ ಮದ್ಯಪ್ರಿಯರಿಗೆ ನೋ ಟೆನ್ಷನ್..!

ದೇಶದ ವಿವಿಧ ಭಾಗಗಳಲ್ಲಿ 10,427 ಜನರ ರಕ್ತ ಪರೀಕ್ಷೆ ನಡೆಸಿ ವೈಜ್ಞಾನಿಕ ಹಾಗೂ ಔದ್ಯಮಿಕ ಸಂಶೋಧನಾ ಪರಿಷತ್ತು ಈ ಸಮೀಕ್ಷೆ ಕೈಗೊಂಡಿತ್ತು. ಈ ವೇಳೆ ಧೂಮಪಾನಿಗಳು ಹಾಗೂ ಸಸ್ಯಾಹಾರಿಗಳಲ್ಲಿ ಸೋಂಕು ಕಡಿಮೆ ಎಂದು ಕಂಡುಬಂದಿದೆ.ಇನ್ನು ಒ ರಕ್ತದ ಗುಂಪಿನವರಲ್ಲಿ ಸೋಂಕು ಕಡಿಮೆ ಇದೆ. ಆದರೆ ಬಿ ಹಾಗೂ ಎಬಿ ರಕ್ತ ಕಣದವರಲ್ಲಿ ಸೋಂಕು ಅಧಿಕವಾಗಿದೆ ಎಂದು ಗೊತ್ತಾಗಿದೆ.